ಕಮಠಾಣ(ಜನವಾಡ): ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರಸಕ್ತ ವರ್ಷ ಪದವಿ ಪೂರೈಸಿದ ವಿದ್ಯಾರ್ಥಿಗಳನ್ನು ಶನಿವಾರ ಬೀಳ್ಕೊಡಲಾಯಿತು.
ಅಮುನಿಯಲ್ ಫಾರ್ಮಾಸುಟಿಕಲ್ ಲಿಮಿಟೆಡ್ ಅಧ್ಯಕ್ಷ ರವಿಚಂದ್ರ ಮಾತನಾಡಿ, ಪಶು ವೈದ್ಯಕೀಯ ಪದವೀಧರರಿಗೆ ಖಾಸಗಿ ವಲಯದಲ್ಲೂ ಅನೇಕ ಉದ್ಯೋಗ ಅವಕಾಶಗಳು ಇವೆ ಎಂದು ಹೇಳಿದರು.
ಕಾಲೇಜು ಡೀನ್ ಡಾ. ಎಂ.ಕೆ. ತಾಂಡಲೆ ಮಾತನಾಡಿದರು.
ಡಾ.ಕಿರಣ ಹಾಗೂ ಡಾ. ರೂಪಾಲಿ ಸಂಪಾದಿಸಿದ ಉತ್ಕರ್ಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾಲೇಜಿನ ಇಂಟರ್ನ್ಶಿಪ್ ಸಂಯೋಜಕ ಡಾ. ವೆಂಕನಗೌಡ, ಡಾ.ಕಿರಣ ಎಂ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.