ADVERTISEMENT

ಬೀದರ್‌ನಲ್ಲಿ ಮತ್ತೆ 15 ಮಂದಿಗೆ ಕೋವಿಡ್‌ ಸೋಂಕು

ಇನ್ನೂ ಬರಬೇಕಿದೆ 3,118 ಜನರ ವೈದ್ಯಕೀಯ ವರದಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:35 IST
Last Updated 9 ಜುಲೈ 2020, 14:35 IST
ಬೀದರ್‌ ಜಿಲ್ಲಾಡಳಿತ ಸಾರ್ವಜನಿಕರಿಗೆ ತಾಯಿ, ತಂದೆ ಹಾಗೂ ಮಗುವಿನ ಚಿತ್ರದೊಂದಿಗೆ ಕಳಿಸಿದ ಸಂದೇಶ
ಬೀದರ್‌ ಜಿಲ್ಲಾಡಳಿತ ಸಾರ್ವಜನಿಕರಿಗೆ ತಾಯಿ, ತಂದೆ ಹಾಗೂ ಮಗುವಿನ ಚಿತ್ರದೊಂದಿಗೆ ಕಳಿಸಿದ ಸಂದೇಶ   

ಬೀದರ್: ಜಿಲ್ಲೆಯಲ್ಲಿ ಗುರುವಾರ ಮತ್ತೆ 15 ಜನರಿಗೆ ಕೋವಿಡ್‌- 19 ತಗುಲಿದೆ. ಕೋವಿಡ್ ಪೀಡಿತರ ಸಂಖ್ಯೆ 894ಕ್ಕೆ ತಲುಪಿದೆ.

ಬೀದರ್‌ ತಾಲ್ಲೂಕಿನ 14 ವರ್ಷದ ಬಾಲಕಿ, 47, 68. ವರ್ಷದ ಪುರುಷ, 85, 48, 35 ವರ್ಷದ ಮಹಿಳೆ, 19 ವರ್ಷದ ಯುವತಿಗೆ ಹಾಗೂ ಔರಾದ್‌ ತಾಲ್ಲೂಕಿನ 46 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದೆ.

ಹುಮನಾಬಾದ್‌ ತಾಲ್ಲೂಕಿನ 14 ವರ್ಷದ ಬಾಲಕ, 17 ವರ್ಷದ ಯುವಕ, 27,35 ವರ್ಷದ ಮಹಿಳೆ ಹಾಗೂ 36 ವರ್ಷದ ಪುರುಷನಿಗೆ, ಭಾಲ್ಕಿ ತಾಲ್ಲೂಕಿನ 44 ಹಾಗೂ 31 ವರ್ಷದ ಮಹಿಳೆಗೆ ಕೋವಿಡ್‌ ತಗುಲಿದೆ.

ADVERTISEMENT

ಗುರುವಾರವೂ ಜಿಲ್ಲೆಯಲ್ಲಿ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಬೀದರ್‌ ಹಾಗೂ ಔರಾದ್‌ ತಾಲ್ಲೂಕಿನಲ್ಲಿ ಮೃತಪಟ್ಟ ಒಟ್ಟು ಇಬ್ಬರ ವೈದ್ಯಕೀಯ ವರದಿ ಪ್ರಕಟವಾಗಬೇಕಿದೆ. 3,118 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ.

ಜಿಲ್ಲೆಯಲ್ಲಿ ಈವರೆಗೆ 41,839 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 3,7827 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಹಾಗೂ 894 ಪಾಸಿಟಿವ್‌ ಬಂದಿವೆ.

562 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.