ADVERTISEMENT

ಭಾಲ್ಕಿ: ಬೆಳೆ ಹಾನಿ ಮಾಹಿತಿ ತಂತ್ರಾಂಶದಲ್ಲಿ ಸೇರಿಸಿ- ಕೇಂದ್ರ ಸಚಿವ ಭಗವಂತ ಖೂಬಾ

ವಿವಿಧೆಡೆ ಬೆಳೆ ಹಾನಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 3:42 IST
Last Updated 5 ಅಕ್ಟೋಬರ್ 2021, 3:42 IST
ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕೇಂದ್ರ ಸಚಿವ ಭಗವಂತ ಖೂಬಾ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ ಇದ್ದರು
ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕೇಂದ್ರ ಸಚಿವ ಭಗವಂತ ಖೂಬಾ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ ಇದ್ದರು   

ಭಾಲ್ಕಿ: ತಾಲ್ಲೂಕಿನ ವಿವಿಧೆಡೆ ಕೇಂದ್ರ ಸಚಿವ ಭಗವಂತ ಖೂಬಾ ಸಂಚರಿಸಿ ಅತಿವೃಷ್ಟಿಯಿಂದಾದ ಬೆಳೆ ಹಾನಿ, ಸೇತುವೆ, ರಸ್ತೆ ಹಾನಿಯನ್ನು ಪರಿಶೀಲಿಸಿದರು.

ಭಾತಂಬ್ರಾ, ಲಖಣಗಾಂವ, ಬೋಳೆಗಾಂವ ಕ್ರಾಸ್, ಅಟ್ಟರ್ಗಾ, ಹಲಸಿ ತೂಗಾಂವ, ಕೇಸರಜವಳಗಾ, ಇಂಚೂರ್‌, ಸಾಯಿಗಾಂವ, ಮೇಹಕರ ಗ್ರಾಮಗಳಿಗೆ ಭೇಟಿ ನೀಡಿ ನೆರೆ ಹಾವಳಿ, ಅತಿವೃಷ್ಟಿಯಿಂದ ಹಾಳಾದ ರಸ್ತೆ, ಸೇತುವೆ, ಬೆಳೆಯನ್ನು ವೀಕ್ಷಿಸಿದರು.

ಕೂಡಲೇ ಎಲ್ಲಾ ಮಾಹಿತಿ ಸರ್ಕಾರಕ್ಕೆ ಕಳುಹಿಸಬೇಕು. ರೈತರ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ಸೇರಿಸಿ. ಯಾವ ರೈತರು ಸರ್ಕಾರದ ಪರಿಹಾರದಿಂದ ವಂಚಿತರಾಗಬಾರದು ಎಂದುಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಸರ್ಕಾರ ನಿಮ್ಮ ಜೊತೆಗಿದೆ. ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ’ ಎಂದು ಹೇಳಿ ರೈತರಿಗೆ ಧೈರ್ಯ ತುಂಬಿದರು. ನಂತರ ತಾಲ್ಲೂಕಿನ ಸಿದ್ಧಾಪುರ ವಾಡಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ‘ಮನೆಗಳಿಗೆ ಜಲೋತ್ಸವ– ಮನೆ ಮನೆಗೆ ಗಂಗೆ’ ಕಾರ್ಯಕ್ರಮದ ಮೂಲಕ ನೀರಿನ ಸಂಪರ್ಕ ವ್ಯವಸ್ಥೆಗೆ ಚಾಲನೆ ನೀಡಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ, ಶಿವರಾಜ ಗಂದಗೆ, ತಾಲ್ಲೂಕು ಅಧ್ಯಕ್ಷ ಪಂಡಿತ ಶಿರೋಳೆ, ತಹಶೀಲ್ದಾರ್‌ ಕೀರ್ತಿ ಚಾಲಾಕ್‌, ಜಂಟಿ ನಿರ್ದೇಶಕಿ ತಾರಾಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.