ಭಾಲ್ಕಿ: ತಾಲ್ಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಅಯೋಧ್ಯೆ ರಾಮ ಮಂದಿರ ಮತ್ತು ಜ್ಯೋತಿರ್ಲಿಂಗ ದರುಶನಕ್ಕೆ ಸೈಕಲ್ ಯಾತ್ರೆ ಹೊರಟ ಯುವಕನನ್ನು ಸನ್ಮಾನಿಸಲಾಯಿತು.
ಬೆಂಗಳೂರಿನಿಂದ ಸೈಕಲ್ ಮೇಲೆ ಯಾತ್ರೆ ಹೊರಟ ಪ್ರದೀಪ ಪಾಟೀಲ ಎಂಬುವ ಯುವಕನನ್ನು ಮಾರ್ಗ ಮಧ್ಯದ ಹೊನ್ನಳ್ಳಿ ಗ್ರಾಮದ ಮಹಾದೇವ ಮಂದಿರ ಆವರಣದಲ್ಲಿ ಯುವಕರು ಸೈಕಲ್ ಯಾತ್ರಿಕ ಪ್ರದೀಪ ಪಾಟೀಲ ಅವರನ್ನು ಸನ್ಮಾನಿಸಿದರು.
ಗ್ರಾಮದ ಪ್ರಮುಖರಾದ ದಯಾನಂದ ಪಾಟೀಲ, ಸಂಜಯಕುಮಾರ, ನಾಗರಾಜ ಬಿರಾದಾರ, ಮಹಾದೇವ ಬಿರಾದಾರ, ನೆಹರು ಬಿರಾದಾರ, ಬಸವರಾಜ ಏಳುವರೆ, ದೀಪಕ ಬಿರಾದಾರ, ಮಹಾದೇವ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.