ADVERTISEMENT

ಕೆಎಟಿ ಆದೇಶ ತಿರುಚಿವಿಕೆ: ಬಸವತೀರ್ಥ ಮಠದ ಸ್ವಾಮೀಜಿ ವಿರುದ್ಧ ಪ್ರಕರಣಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 13:06 IST
Last Updated 9 ಆಗಸ್ಟ್ 2023, 13:06 IST
ಸಿದ್ದಲಿಂಗ ಸ್ವಾಮೀಜಿ
ಸಿದ್ದಲಿಂಗ ಸ್ವಾಮೀಜಿ   

ಬೀದರ್‌: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೇಲ್ಮನವಿ ನ್ಯಾಯಾಲಯದ (ಕೆಎಟಿ) ಆದೇಶವನ್ನು ತಿರುಚಿರುವ ಹುಮನಾಬಾದ್‌ ಹೊರವಲಯದ ಕಲ್ಲೂರು ರಸ್ತೆಯಲ್ಲಿರುವ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಸಂಬಂಧಿಸಿದ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಹುಮನಾಬಾದ್‌ ತಹಶೀಲ್ದಾರ್‌ ಅವರಿಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಂಗಳವಾರ ಆದೇಶ ನೀಡಿದ್ದಾರೆ.

ಹುಮನಾಬಾದ್‌ ತಾಲ್ಲೂಕಿನ ಬೋರಂಪಳ್ಳಿ ಸರ್ವೇ ನಂಬರ್‌ 38, 274, 277, 282, ಗಡವಂತಿ ಗ್ರಾಮದ ಸರ್ವೇ ನಂಬರ್‌ 156ಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ದಾಖಲೆಗಳನ್ನು ತಿರುಚಿರುವುದು ದೃಢಪಟ್ಟಿದೆ ಎಂದು ಬೆಂಗಳೂರಿನ ಮೇಲ್ಮನವಿ ನ್ಯಾಯಾಲಯವು 2021ರ ಡಿಸೆಂಬರ್‌ 28ರಂದು ಆದೇಶ ಹೊರಡಿಸಿತ್ತು. ಬಸವತೀರ್ಥ ಮಠಕ್ಕೂ ಈ ಆಸ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಆದೇಶಿಸಿತ್ತು. 

ಸ್ವಾಮೀಜಿ ಅವರು ಕೆಎಟಿ ಆದೇಶದ ಖಂಡಿಕೆಯಲ್ಲಿ ಇಲ್ಲದ ವಿಷಯವನ್ನು ಸೇರಿಸಿ ತಿರುಚಿದ್ದಾರೆ ಎಂದು 2023ರ ಏಪ್ರಿಲ್‌ 20ರಂದು ಬೋರಂಪಳ್ಳಿಯ ಚಂದ್ರಕಾಂತ ಶಾಮರಾವ ಬಿರಾದಾರ ಅವರು ಜಿಲ್ಲಾಧಿಕಾರಿಗೆ ಲಿಖಿತ  ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಜಿಲ್ಲಾಧಿಕಾರಿ ವಿಚಾರಣೆ ನಡೆಸಿ, ಈ ಆದೇಶ ನೀಡಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.