ADVERTISEMENT

ಬೀದರ್‌ | ಡಿಸಿಸಿ ಬ್ಯಾಂಕ್‌ ಚುನಾವಣೆ; ಮೂರು ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 15:36 IST
Last Updated 23 ಸೆಪ್ಟೆಂಬರ್ 2023, 15:36 IST
ಬೀದರ್‌ ಡಿಸಿಸಿ ಬ್ಯಾಂಕ್‌
ಬೀದರ್‌ ಡಿಸಿಸಿ ಬ್ಯಾಂಕ್‌   

ಬೀದರ್‌: ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಚುನಾವಣೆಗೆ ಶನಿವಾರ ಮೂವರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

‘ಎ’ ವರ್ಗದ ಸದಸ್ಯತ್ವ ಪಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಭಾಲ್ಕಿ ತಾಲ್ಲೂಕು ಮತಕ್ಷೇತ್ರದಿಂದ ವಸಂತರಾವ ಮಾರುತಿರಾವ, ಬೀದರ್‌ ತಾಲ್ಲೂಕು ಮತ ಕ್ಷೇತ್ರದಿಂದ ವೈಜಿನಾಥ ಅಣ್ಣೆಪ್ಪಾ, ಬಸವರಾಜ ನಾಗಶೆಟ್ಟಿ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಶುಕ್ರವಾರ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಭಾಲ್ಕಿ ತಾಲ್ಲೂಕು ಮತಕ್ಷೇತ್ರದಿಂದ ರಾಚಪ್ಪಾ ಬಸವಣಪ್ಪಾ ಪಾಟೀಲ, ನಾಗನಾಥ ದಾದಾರಾವ ಬಗದೋರೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಅಕ್ಟೋಬರ್‌ 4ರಂದು 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಜರುಗಲಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.