ಬೀದರ್: ರಾಜಕೀಯ ನೇತಾರರ ಕುತಂತ್ರದಿಂದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಬಂದ್ ಆಗಿದ್ದು, ಅಲ್ಲಿನ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕೂಡಲೇ ಸರ್ಕಾರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕೆಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಆಗ್ರಹಿಸಿದೆ.
ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಸಲ್ಲಿಸಿ ಒತ್ತಾಯಿಸಿದರು.
ಕಾರಂಜಾ ಸಂತ್ರಸ್ತರು ಸುಮಾರು ಎರಡು ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ನಿರಂತರ ಧರಣಿ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಕಿವಿಗೊಟ್ಟಿಲ್ಲ. ಸಿದ್ಧಸಿರಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ಕಬ್ಬು ಬೆಳೆಗಾರರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಸ್ಥಗಿತಗೊಂಡ ಬೀದರ್ ನಾಗರಿಕ ವಿಮಾನಯಾನ ಸೇವೆ ಪುನರಾರಂಭಿಸಬೇಕು.ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಮಂಜೂರಾತಿ ದೊರೆತರೂ ಕಾಮಗಾರಿ ಆರಂಭಗೊಂಡಿಲ್ಲ. ಬೀದರ್‌ನಲ್ಲಿ ಭೂಮಾಫಿಯಾಕ್ಕೆ ಕಡಿವಾಣ ಹಾಕಿ, ಬಡವರಿಗೆ ಸೂರು ಕಟ್ಟಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸೇನೆ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್, ಉಪಾಧ್ಯಕ್ಷ ಎಂ.ಡಿ. ಮಸ್ತಾನ್ ಮುಲ್ಲಾ, ಕಾರ್ಯಾಧ್ಯಕ್ಷ ತುಕಾರಾಮ ರಾಗಾಪೂರೆ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಏಣಕೂರೆ, ಶಿವರಾಜ ನೇಳವಾಳಕರ್, ನವೀಲ್ ಅಲ್ಲಪೂರ, ಸುಂದರ ಬಕ್ಕಚೌಡಿ, ಕಮಲ ಹಾಸನ್ ಭಾವಿದೊಡ್ಡಿ, ಅಂಬಾದಾಸ ಬೆಲೂರೆ, ಸಂಜುಕುಮಾರ ಗೋರನಳ್ಳಿ, ಸೂರ್ಯಕಾಂತ ಬಲ್ಲೂರ, ಜೇಮ್ಸ್ , ವಿಕ್ಕಿ ಚಿಟ್ಟಾ, ಸ್ವಾಮಿದಾಸ ನಿದ್ದೆ, ವೆಂಕಟೇಶ್ವರ ಚಿದ್ರಿ, ಶ್ರೀನಾಥ ಚಿದ್ರಿ, ಅನೀಲ ಶಿಂಧೆ, ಅನೀಲ ಸಾಂಗವಿ, ರಿಚರ್ಡ್ ಹಮೀಲಾಪೂರ, ಸುಶೀಲ ಕೆಂಪೆನೋರ್, ಯೇಶಪ್ಪಾ ಶೆಂಬೆಳ್ಳಿ, ವೆಂಕಟೇಶ ಪಾಟೀಲ, ದಾವೀದ್ ಏಕಲಾರ್, ಸುರೇಶ ದೊಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.