ADVERTISEMENT

ಹಿರಿಯ ನಾಗರಿಕರಿಗೆ ಸಾಮಗ್ರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 14:20 IST
Last Updated 4 ಅಕ್ಟೋಬರ್ 2020, 14:20 IST
ಬೀದರ್‌ನ ಜ್ಯೋತಿಬಾ ಫುಲೆ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ವಿವೇಕ ದೀಪಕ ವಾಲಿ ಫೌಂಡೇಷನ್ ವತಿಯಿಂದ ಹಣ್ಣು, ಮಾಸ್ಕ್ ವಿತರಿಸಲಾಯಿತು
ಬೀದರ್‌ನ ಜ್ಯೋತಿಬಾ ಫುಲೆ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ವಿವೇಕ ದೀಪಕ ವಾಲಿ ಫೌಂಡೇಷನ್ ವತಿಯಿಂದ ಹಣ್ಣು, ಮಾಸ್ಕ್ ವಿತರಿಸಲಾಯಿತು   

ಬೀದರ್: ನಗರದ ಜ್ಯೋತಿಬಾ ಫುಲೆ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ವಿವೇಕ ದೀಪಕ ವಾಲಿ ಫೌಂಡೇಷನ್ ವತಿಯಿಂದ ಹಣ್ಣು, ಮಾಸ್ಕ್, ನೀರು ಬಿಸಿ ಮಾಡುವ ಉಪಕರಣ ಹಾಗೂ ಆಸ್ಕಿ ಮೀಟರ್ ವಿತರಿಸಲಾಯಿತು.

ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಮಗ್ರಿಗಳನ್ನು ವಿತರಿಸಲಾಯಿತು.

ವೃದ್ಧಾಶ್ರಮದ ಮುಖ್ಯಸ್ಥ ಅನಿಲಕುಮಾರ ಬೆಲ್ದಾರ್ ಮಾತನಾಡಿ, ‘ವಾಲಿ ಫೌಂಡೇಷನ್ ಹಿರಿಯ ನಾಗರಿಕರಿಗೆ ನೆರವಿಗೆ ಬರುವ ಮೂಲಕ ಮಾನವೀಯ ಕಾರ್ಯಗಳನ್ನು ಮಾಡುತ್ತಿದೆ’ ಎಂದರು.

ADVERTISEMENT

ಫೌಂಡೇಷನ್ ಮುಖ್ಯಸ್ಥ ವಿವೇಕ ವಾಲಿ, ಉದ್ಯಮಿ ದೀಪಕ ವಾಲಿ, ರವಿ ಕೊಡಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.