ADVERTISEMENT

‘ಲಿಂಗಾಯತ ಸಮಾನತೆ ಸಾರುವ ಧರ್ಮ’: ಪ್ರೊ.ಮಹಾದೇವಪ್ಪ ಉಪ್ಪಿನ್

ವರ್ತಮಾನದ ತಲ್ಲಣಗಳಿಗೆ ವಚನ ಸಾಂತ್ವನ – ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 14:07 IST
Last Updated 29 ಫೆಬ್ರುವರಿ 2020, 14:07 IST
ಭಾಲ್ಕಿಯ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವರ್ತಮಾನದ ತಲ್ಲಣಗಳಿಗೆ ವಚನ ಸಾಂತ್ವನ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಶಂಭುಲಿಂಗ ಕಾಮಣ್ಣ ಮಾತನಾಡಿದರು
ಭಾಲ್ಕಿಯ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವರ್ತಮಾನದ ತಲ್ಲಣಗಳಿಗೆ ವಚನ ಸಾಂತ್ವನ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಶಂಭುಲಿಂಗ ಕಾಮಣ್ಣ ಮಾತನಾಡಿದರು   

ಭಾಲ್ಕಿ: ಬಸವಾದಿ ಶರಣರ ವಚನ ಸಂವಿಧಾನದಲ್ಲಿ ಅಸಮಾನತೆಗೆ ಅವಕಾಶವಿಲ್ಲ. ಲಿಂಗಾಯತವು ಸಮಾನತೆಯನ್ನು ಸಾರುವ ಧರ್ಮವಾಗಿರುವುದರಿಂದ ವಿಶ್ವದಲ್ಲಿ ವಿಶಿಷ್ಟ ಎನಿಸಿದೆ ಎಂದು ವಿಚಾರ ಸಂಕಿರಣದ ಸರ್ವಾಧ್ಯಕ್ಷ ಪ್ರೊ.ಮಹಾದೇವಪ್ಪ ಉಪ್ಪಿನ್ ನುಡಿದರು.

ಪಟ್ಟಣದ ವಿದ್ಯಾನಿಕೇತನ ಪದವಿ ವಿದ್ಯಾಲಯದಲ್ಲಿ ಗುರುವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ‘ವರ್ತಮಾನದ ತಲ್ಲಣಗಳಿಗೆ ವಚನ ಸಾಂತ್ವನ’ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಲಿಂಗಾಯತ ಧರ್ಮ ಜಾತಿ, ವರ್ಣ, ಲಿಂಗ, ಆಸ್ತಿ ಆಧಾರದ ಮೇಲೆ ತಾರತಮ್ಯ ಮಾಡದೇ ನೀರಿನಂತೆ ಸಮತೆಯನ್ನು ಕಾಯ್ದು ಕೊಳ್ಳುವ ಧರ್ಮವಾಗಿದೆ ಎಂದರು.

ADVERTISEMENT

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಮಾತನಾಡಿ, ವಚನ ಸಾಹಿತ್ಯದಲ್ಲಿ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದ್ದು, ಯುವಕರು ಹೆಚ್ಚೆಚ್ಚು ವಚನ, ಮೌಲ್ಯಾಧಾರಿತ ಸಾಹಿತ್ಯವನ್ನು ಅಭ್ಯಸಿಸಬೇಕು ಎಂದರು.

ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಪ್ರೊ.ವೈ.ಎ.ದೇವಋಷಿ, ರಾಜಕುಮಾರ ಸಾಲಿ, ಮೇನಕಾ ಪಾಟೀಲ, ಪ್ರೊ.ಅಶೋಕ ಮೈನಳ್ಳೆ, ವೀರಣ್ಣ ಕುಂಬಾರ, ಸಿದ್ದಪ್ಪ ಬಿರಾದಾರ ಉಪನ್ಯಾಸ ನೀಡಿದರು. ಪ್ರೊ.ಮಲ್ಲಮ್ಮ ಆರ್.ಪಾಟೀಲ, ಎಸ್.ಎಂ.ಪಾಟೀಲ, ಪಾರ್ವತಿ ಧುಮ್ಮನಸೂರೆ ವಚನ ವಿಶ್ಲೇಷಿಸಿದರು.

ಡಾ.ಅರುಣಾ ಸುಲ್ತಾನಪುರೆ, ಪ್ರೊ.ಕಲಿಮೊದ್ದೀನ್, ಪ್ರೊ.ಸಂಜೀವಕುಮಾರ ಮಾಶೆಟ್ಟೆ, ಪಿ.ಕೆ.ಪ್ರಭು, ಸಂತೋಷ ಹಡಪದ, ನಾಗಶೆಟ್ಟೆಪ್ಪ ಲಂಜವಾಡೆ, ಶರಣಯ್ಯ ಮಠಪತಿ, ಡಿ.ಡಿ.ಶಿಂಧೆ, ಓಂಪ್ರಕಾಶ ರೊಟ್ಟೆ ಇದ್ದರು.

ಪ್ರೊ.ಅಶೋಕ ಭಂಡಾರಿ ನಿರೂಪಿಸಿದರು. ಕಲ್ಲಪ್ಪ ಹೂಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.