ADVERTISEMENT

ಕೊಟರಕಿ ಪರಿವಾರದಿಂದ ₹5 ಲಕ್ಷ ದೇಣಿಗೆ

ಅಯೋಧ್ಯೆಯಲ್ಲಿ ನೂತನ ರಾಮ ಮಂದಿರ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 15:30 IST
Last Updated 11 ಫೆಬ್ರುವರಿ 2021, 15:30 IST
ಬೀದರ್‌ನಲ್ಲಿ ಕೊಟರಕಿ ಕನ್‍ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಶಂಕರರಾವ್ ಕೊಟರಕಿ ಅವರು ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅವರಿಗೆ ₹5 ಲಕ್ಷದ ದೇಣಿಗೆಯ ಚೆಕ್ ಹಸ್ತಾಂತರಿಸಿದರು
ಬೀದರ್‌ನಲ್ಲಿ ಕೊಟರಕಿ ಕನ್‍ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಶಂಕರರಾವ್ ಕೊಟರಕಿ ಅವರು ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅವರಿಗೆ ₹5 ಲಕ್ಷದ ದೇಣಿಗೆಯ ಚೆಕ್ ಹಸ್ತಾಂತರಿಸಿದರು   

ಬೀದರ್: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರಕ್ಕೆ ಇಲ್ಲಿಯ ಕೊಟರಕಿ ಪರಿವಾರ ₹5 ಲಕ್ಷ ದೇಣಿಗೆ ನೀಡಿದೆ.

ಕೊಟರಕಿ ಕನ್‍ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಶಂಕರರಾವ್ ಕೊಟರಕಿ ಅವರು ನಗರದಲ್ಲಿ
ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅವರಿಗೆ ದೇಣಿಗೆ ಮೊತ್ತದ ಚೆಕ್ ಹಸ್ತಾಂತರಿಸಿದರು.

‘ಕೊಟರಕಿ ಪರಿವಾರ ಹಿಂದಿನಿಂದಲೂ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಉದಾರ ಮನಸ್ಸಿನಿಂದ ದೇಣಿಗೆ ಕೊಡುತ್ತ ಬಂದಿದೆ. ರಾಮ ಮಂದಿರ ನಿರ್ಮಾಣದ ಪವಿತ್ರ ಕಾರ್ಯಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿರುವುದು ಪ್ರಶಂಸನೀಯ’ ಎಂದು ಮುಖಂಡ ಪ್ರಕಾಶ ಟೊಣ್ಣೆ ಹೇಳಿದರು.

ADVERTISEMENT

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಣಮಂತರಾವ್ ಪಾಟೀಲ, ಸಂತೋಷ ಕೊಟರಕಿ, ಆನಂದ ಕೊಟರಕಿ, ಸಂಗಮೇಶ ಕೊಟರಕಿ, ಗಜಾನನ ಪೋಲಕವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.