ಭಾಲ್ಕಿ: ಹಳೇ ಪಟ್ಟಣದ ಸರಾಯಿ ಗಲ್ಲಿಯ ಚರಂಡಿಗಳು ಸ್ವಚ್ಛಗೊಂಡಿಲ್ಲ. ಹೀಗಾಗಿ ಮನೆಗಳ ಚರಂಡಿ ಮತ್ತು ಮಳೆ ನೀರು ರಸ್ತೆ, ಹನುಮಾನ ದೇವಸ್ಥಾನ ಸುತ್ತಲೂ ಹರಿಯುತ್ತಿದೆ. ಹೀಗಾಗಿ ಕಾಲೊನಿ ನಿವಾಸಿಗಳಿಗೆ ಸಾರ್ವಜನಿಕರಿಗೆ ರೋಗಗಳ ಭಯ ಕಾಡುತ್ತಿದೆ. ಈ ರಸ್ತೆ ಮೇಲೆ ಹಗಲು ಹೊತ್ತಿನಲ್ಲೂ ಸಂಚರಿಸಲಾಗುತ್ತಿಲ್ಲ. ಇನ್ನೂ ರಾತ್ರಿ ವೇಳೆ ಓಡಾಟ ತುಂಬಾ ಕಷ್ಟವಾಗಿದೆ. ದಿನಪೂರ್ತಿ ಚರಂಡಿಯ ದುರ್ವಾಸನೆ ಕಾಲೊನಿ ನಿವಾಸಿಗಳನ್ನು ಕಾಡುತ್ತಿದೆ. ಈ ದುರ್ನಾತದಿಂದ ಸಾಂಕ್ರಾಮಿಕ ರೋಗಗಳ ಭೀತಿ ನಮ್ಮನ್ನು ಬಹುವಾಗಿ ಕಾಡುತ್ತಿದೆ. ನಮ್ಮ ಸಮಸ್ಯೆ ಸಂಬಂಧ ಅನೇಕ ಸಾರಿ ಸಂಬಂಧ ಪಟ್ಟ ಜನಪ್ರತಿನಿಧಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಯನ್ನು ಬಗೆಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಓಣಿಯ ನಿವಾಸಿಗಳಾದ ಕಲ್ಯಾಣರಾವ ಚಾಟೆ, ಗದಗು ಸ್ವಾಮಿ, ದಿನೇಶ ಭಾಂಗೆ, ದತ್ತ ಜಾಧವ, ಬಿ. ಮಂಜರಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.