ADVERTISEMENT

ಬೀದರ್: ಅಂಬೇಡ್ಕರ್‌ ಗ್ರಂಥಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 4:14 IST
Last Updated 29 ಜುಲೈ 2021, 4:14 IST
ಗುತ್ತಿ ಗ್ರಾಮದಲ್ಲಿ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು
ಗುತ್ತಿ ಗ್ರಾಮದಲ್ಲಿ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು   

ಹುಲಸೂರ: ತಾಲ್ಲೂಕಿನ ಗುತ್ತಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ ಚಾರಿಟಬಲ್ ಟ್ಟಸ್ಟ್ ‌ವತಿಯಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಗ್ರಂಥಾಲಯ ಉದ್ಘಾಟಿಸಿದ ಭಂತೆ ಧಮ್ಮನಾಗ ಗುರುಗಳು ಮಾತನಾಡಿ, ‘ಯುವಕರು ಓದಿನ ಕಡೆ ಗಮನ ಹರಿಸಬೇಕು. ಪುಸ್ತಕ ಓದುವುದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ’ ಎಂದರು.

ಪಾಂಡುರಂಗ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಬೌದ್ಧ ಮಹಾಸಭೆ ತಾಲ್ಲೂಕು ಅಧ್ಯಕ್ಷ ಧರ್ಮೇಂದ್ರ ಭೊಸಲೆ, ಧಮ್ಮದೀಪ ಗಾಯಕವಾಡ, ಹಣಮಂತ ಕುಸೆ, ಬಲಭೀಮ ವನಖೇಡೆ, ರವಿಂದ್ರ ಶೃಂಗಾರೆ, ಮುಖ್ಯಗುರು ಹರಿನಾಥ ಪಾಟೀಲ, ನಾಮದೇವ, ನಾಗೇಶ ಗಾಯಕವಾಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.