ADVERTISEMENT

ಮೊಟ್ಟೆ ವಿತರಣೆ ಆದೇಶ ವಾಪಸ್‌ಗೆ ಮನವಿ

ಮನವಿ ಪತ್ರಕ್ಕೆ 50ಕ್ಕೂ ಹೆಚ್ಚು ಮಠಾಧೀಶರ ಸಹಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 6:14 IST
Last Updated 7 ಡಿಸೆಂಬರ್ 2021, 6:14 IST
ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆ ವಿತರಣೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಪ್ರಭು ಚವಾಣ್‌ ಇದ್ದರು

ಭಾಲ್ಕಿ (ಬೀದರ್‌ ಜಿಲ್ಲೆ):ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಆದೇಶ ಹಿಂಪಡೆಯಲು ಕೋರಿ ಕಲ್ಯಾಣ ಕರ್ನಾಟಕದ 50ಕ್ಕೂ ಹೆಚ್ಚು ಮಠಾಧೀಶರ ಸಹಿಯುಳ್ಳ ಮನವಿಪತ್ರವನ್ನು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಇಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.

‘ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಸರ್ಕಾರದ ಚಿಂತನೆ ಒಳ್ಳೆಯ ಬೆಳವಣಿಗೆ. ಆದರೆ, ಬಿಸಿಯೂಟ ಆಹಾರದ ಜತೆಗೆ ಮೊಟ್ಟೆ ಕೊಡುತ್ತಿರುವುದು ಸರಿಯಲ್ಲ. ಶಾಲೆ ಎಲ್ಲ ವರ್ಗದ ಮಕ್ಕಳಿಗೂ ವಿದ್ಯೆ ಕೊಡುವ ಸ್ಥಳ. ಹೀಗಾಗಿ ಎಲ್ಲ ಮಕ್ಕಳಿಗೆ ಸರಿ ಹೊಂದುವ ಸತ್ವಯುಕ್ತ ಸಸ್ಯಾಹಾರ ಕೊಡಬೇಕು’ ಎಂದೂ ಒತ್ತಾಯಿಸಿದರು.

‘ಸಂಪ್ರದಾಯಸ್ಥ ಕುಟುಂಬದ ಮಕ್ಕಳು ಸಹಜವಾಗಿಯೇ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಮೊಟ್ಟೆ ತಿನ್ನ ಬಹುದು. ಇದರಿಂದ ಧಾರ್ಮಿಕ ನಂಬಿಕೆ ಗಳಿಗೆ ಧಕ್ಕೆ ಉಂಟಾಗುತ್ತದೆ. ಸರ್ಕಾರ ರಾಜಧರ್ಮ ಪಾಲಿಸಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.