
ಪ್ರಜಾವಾಣಿ ವಾರ್ತೆ
ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಬೊಳೆಗಾಂವ ಗ್ರಾಮದ ನಿವಾಸಿ ಹಾಗೂ ವೃದ್ಧದಂಪತಿ ಬಾಬುರಾವ (85) ಹಾಗೂ ವಿಮಲಾಬಾಯಿ ಬಿರಾದಾರ(80) ಒಂದೇ ದಿನ ನಿಧನರಾದರು.
ವಯೋಸಹಜ ಕಾಯಿಲೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿಯಲ್ಲಿ ಪತ್ನಿ ವಿಮಲಾಬಾಯಿ ಬಿರಾದಾರ ಅವರು ಡಿ.29ರ ರಾತ್ರಿ 11 ಗಂಟೆಗೆ ತಮ್ಮ ನಿವಾಸದಲ್ಲಿ ನಿಧನರಾದರೆ, ಪತಿ ಬಾಬುರಾವ ಬಿರಾದಾರ ಡಿ. 30ರಂದು ಬೆಳಿಗ್ಗೆ ಸುಮಾರು 7ಕ್ಕೆ ನಿಧನರಾಗಿದ್ದಾರೆ.
ಸುಮಾರು ಆರು–ಏಳು ದಶಕಗಳ ಕಾಲ ಒಟ್ಟಿಗೆ ಜೀವನ ನಡೆಸಿದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಮಂಗಳವಾರ ಪತಿ–ಪತ್ನಿಯ ಅಂತ್ಯಕ್ರಿಯೆ ನಡೆಯಿತು. ಮೃತರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.