ADVERTISEMENT

ಹಾಲು ಒಕ್ಕೂಟಕ್ಕೆ ಕಾಶೆಂಪೂರ, ಬಿರಾದಾರ, ಬಳತೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 15:35 IST
Last Updated 26 ಅಕ್ಟೋಬರ್ 2018, 15:35 IST
ಮಾರುತಿ ಕಾಶೆಂಪೂರ
ಮಾರುತಿ ಕಾಶೆಂಪೂರ   

ಬೀದರ್: ಕಲಬುರ್ಗಿ-ಯಾದಗಿರ-ಬೀದರ್ ಹಾಲು ಒಕ್ಕೂಟಕ್ಕೆ ಬೀದರ್-ಔರಾದ್ ಉಪ ವಿಭಾಗದಿಂದ ಮಾರುತಿ ಕಾಶೆಂಪೂರ, ಮಲ್ಲಿಕಾರ್ಜುನ ಬಿರಾದಾರ (ಪರಿಹಾರ) ಹಾಗೂ ಭೀಮರಾವ್ ಬಳತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಭಾಗದ ಮೂರೂ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶುಕ್ರವಾರ ಪ್ರಕಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರ ಸಹೋದರರಾಗಿರುವ ಮಾರುತಿ ಕಾಶೆಂಪೂರ ಸತತ ನಾಲ್ಕನೇ ಬಾರಿಗೆ ಕಲಬುರ್ಗಿ-ಯಾದಗಿರ-ಬೀದರ್ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರು ಹಿಂದೆ ಎರಡು ಅವಧಿಗೆ ಕರ್ನಾಟಕ ರಾಜ್ಯ ಹಾಲು ಮಹಾಮಂಡಳದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ADVERTISEMENT

ಮಲ್ಲಿಕಾರ್ಜುನ ಬಿರಾದಾರ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ. ಒಮ್ಮೆ ಅವರು ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದರು. ಮೂರು ವರ್ಷಗಳ ಕಾಲ ಕಲಬುರ್ಗಿ-ಬೀದರ್-ಯಾದಗಿರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಸಮರ್ಥವಾಗಿ ಕೆಲಸ ಮಾಡಿದ್ದರು.

ಭೀಮರಾವ್ ಬಳತೆ ಇದೇ ಮೊದಲ ಬಾರಿಗೆ ಒಕ್ಕೂಟವನ್ನು ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.