ADVERTISEMENT

‘ಆನೆಕಾಲು ರೋಗ: ಮುಂಜಾಗ್ರತೆ ವಹಿಸಿ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 13:29 IST
Last Updated 6 ನವೆಂಬರ್ 2019, 13:29 IST
ಹುಮನಾಬಾದ್‌ನ ಧುಮನಸೂರ್ ಶ್ರೀಸಿದ್ಧಾರೊಢ ಶಾಲೆಯಲ್ಲಿ ಸೋಮವಾರ ಆನೆಕಾಲು ರೋಗಮುಕ್ತ ಅಭಿಯಾನಕ್ಕೆ ಗ್ರಾಪಂ ಅಧ್ಯಕ್ಷ ಮಹೇಶ ಚೀನಕೇರಾ ಮಕ್ಕಳಿಗೆ ಡಿಇಸಿ ಮಾತ್ರೆ ವಿತರಿಸುವ ಮೂಲಕ ಚಾಲನೆ ನೀಡಿದರು.
ಹುಮನಾಬಾದ್‌ನ ಧುಮನಸೂರ್ ಶ್ರೀಸಿದ್ಧಾರೊಢ ಶಾಲೆಯಲ್ಲಿ ಸೋಮವಾರ ಆನೆಕಾಲು ರೋಗಮುಕ್ತ ಅಭಿಯಾನಕ್ಕೆ ಗ್ರಾಪಂ ಅಧ್ಯಕ್ಷ ಮಹೇಶ ಚೀನಕೇರಾ ಮಕ್ಕಳಿಗೆ ಡಿಇಸಿ ಮಾತ್ರೆ ವಿತರಿಸುವ ಮೂಲಕ ಚಾಲನೆ ನೀಡಿದರು.   

ಹುಮನಾಬಾದ್‌: ಆನೆಕಾಲು ರೋಗ ಬಾರದಂತೆ ಪ್ರತಿಯೂಬ್ಬರು ಮುಂಜಾಗ್ರತೆ ವಹಿಸಿಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ ಚೀನಕೇರಾ ಹೇಳಿದರು.

ಸಮೀಪದ ಧುಮನಸೂರ ಗ್ರಾಮದ ಶ್ರೀ ಸಿದ್ಧಾರೂಢ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಿಇಸಿ ಮಾತ್ರೆ ವಿತರಿಸುವ 16ನೇ ಸುತ್ತಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮದ ವಿವಿಧ ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಮಕ್ಕಳಿಗೆ ಆನೆಕಾಲು ರೋಗಬಾರದಂತೆ ಮುಂಜಾಗೃತೆ ವಹಿಸಿ ಕಡ್ಡಾಯವಾಗಿ ಡಿಇಸಿ ಮಾತ್ರೆಯನ್ನು ವಿತರಿಸಬೇಕು ಎಂದು ತಿಳಿಸಿದರು.

ADVERTISEMENT

ಕಿರಿಯ ಆರೋಗ್ಯ ಸಹಾಯಕ ದೇವಿಂದ್ರಪ್ಪಾ ಮಾತನಾಡಿ, ಆನೆಕಾಲು ರೋಗಬಾರದಂತೆ ಡಿಇಸಿ ಮಾತ್ರೆ ಸೇವಿಸಬೇಕು ಎಂದು ಹೇಳಿದರು.

ಬೀದರ್ ಶಿವಕಾಂತ ಹಿರಿಯ ಆರೋಗ್ಯ ಸಹಾಯಕ ಶಿವಕಾಂತ, ಮೋಹನದಾಸ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಮೋಹನದಾಸ್, ಮುಖ್ಯಗುರು ಬಸವರಾಜ ಬೋರಾಳ ಶಿಕ್ಷಕರಾದ ಅಶೋಕಕುಮಾರ, ಮಲ್ಲಿಕಾರ್ಜುನ, ದತ್ತು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.