ADVERTISEMENT

ನೌಕರರ ಭವನ ನವೀಕರಣ: ವಿಜಯಸಿಂಗ್ ವೀಕ್ಷಣೆ

ಗುಣಮಟ್ಟದ ಕಾಮಗಾರಿಗೆ ಮೆಚ್ಚುಗೆ, ಇನ್ನಷ್ಟು ಅನುದಾನದ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 15:53 IST
Last Updated 8 ಅಕ್ಟೋಬರ್ 2020, 15:53 IST
ಬೀದರ್‌ನ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದ ಮುಖ್ಯ ಸಭಾಂಗಣ ನವೀಕರಣ ಕಾಮಗಾರಿ ವೀಕ್ಷಿಸಿದ ನಂತರ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿದರು
ಬೀದರ್‌ನ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದ ಮುಖ್ಯ ಸಭಾಂಗಣ ನವೀಕರಣ ಕಾಮಗಾರಿ ವೀಕ್ಷಿಸಿದ ನಂತರ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿದರು   

ಬೀದರ್: ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದ ಮುಖ್ಯ ಸಭಾಂಗಣ ನವೀಕರಣ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವೀಕ್ಷಿಸಿದರು.

ಕಾಮಗಾರಿ ವ್ಯವಸ್ಥಿತ ಹಾಗೂ ಗುಣಮಟ್ಟದಿಂದ ನಡೆಯುತ್ತಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಬೇಡಿಕೆ ಮೇರೆಗೆ ತಮ್ಮ ಅನುದಾನದಲ್ಲಿ ಭವನದ ನವೀಕರಣ ಕಾಮಗಾರಿಗೆ ₹5 ಲಕ್ಷ ಅನುದಾನ ಒದಗಿಸಲಾಗಿದೆ. ಅನುದಾನದ ಸದ್ಬಳಕೆ ಆಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ADVERTISEMENT

ರಾಜೇಂದ್ರಕುಮಾರ ಗಂದಗೆ ಅವರು ಮುಂದುವರಿದ ಕಾಮಗಾರಿಗೆ ಇನ್ನೂ ₹10 ಲಕ್ಷ ಅನುದಾನ ಕೊಡಲು ಕೋರಿದ್ದಾರೆ. ಕಾಮಗಾರಿಗೆ ನೆರವಾಗಲು ಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರಿಗಾಗಿ ಹತ್ತು ಹಲವು ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಸಂಘದ ಚಟುವಟಿಕೆಗಳಿಗೆ ತಮ್ಮ ಸಹಾಯ, ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ವಿಜಯಸಿಂಗ್ ಅವರು ಭವನದ ನವೀಕರಣಕ್ಕೆ ಅನುದಾನ ಒದಗಿಸಿ ಸಂಘದ ಬೇಡಿಕೆಗೆ ಸ್ಪಂದಿಸಿದ್ದಾರೆ. ನೌಕರರ ಹಿತಕ್ಕಾಗಿ ನಡೆಯುವ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತ ಬಂದಿದ್ದಾರೆ ಎಂದು ಹೇಳಿದರು.

ಬರುವ ದಿನಗಳಲ್ಲಿ ಡೈನಿಂಗ್ ಹಾಲ್, ಮುಖ್ಯ ಸಭಾಂಗಣ ಸಂಪೂರ್ಣ ನವೀಕರಣಗೊಳ್ಳಲಿವೆ. ಭವನವು ಅಚ್ಚುಕಟ್ಟಾದ ಸಭೆ, ಸಮಾರಂಭಗಳನ್ನು ನಡೆಸಲು ನೌಕರರಿಗೆ ವೇದಿಕೆ ಒದಗಿಸಲಿದೆ ಎಂದು ತಿಳಿಸಿದರು.

ಸಂಘದ ವತಿಯಿಂದ ವಿಜಯಸಿಂಗ್ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರಮೇಶ ಮಠಪತಿ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಮಡಿವಾಳ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಬಸವರಾಜ ಜೆಕ್ಕಾ, ಪ್ರಭುಲಿಂಗ ತೂಗಾವೆ, ಓಂಕಾರ ಮಲ್ಲಿಗೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಖಜಾಂಚಿ ಅಶೋಕ ರೆಡ್ಡಿ, ಕೇಂದ್ರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಕುಮಾರ ಹೊಸದೊಡ್ಡೆ, ಸಹ ಕಾರ್ಯದರ್ಶಿ ಶಿವಕುಮಾರ ಬಾವಗೆ, ಯೋಗೇಂದ್ರ ಯದಲಾಪುರೆ, ಮನೋಹರ ಕಾಶಿ, ಶಾಂತಕುಮಾರ ಬಿರಾದಾರ, ಗಣಪತಿ, ಸುನೀಲ್, ಮಕರಂದ, ಅನ್ಸಾರ್ ಬೇಗ್, ಸುಧಾಕರ ಶೇರಿಕಾರ, ಎಂ.ಎ. ಸತ್ತಾರ್, ಉಮೇಶ ಪಾಟೀಲ, ಕಾಶೀನಾಥ ಸ್ವಾಮಿ, ಸಿದ್ದಪ್ಪ ಪಾಟೀಲ, ನೀಲಕಂಠ ಪಾಟೀಲ, ವೆಂಕಟ ಶಿಂದೆ, ಪ್ರಕಾಶ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.