ಹುಲಸೂರ: ‘ಸಮಾಜಮುಖಿ ಕೆಲಸಗಳಲ್ಲಿ ನೆಮ್ಮದಿ ಬಹುದು ಇದೆ. ಸರ್ಕಾರದ ಸೇವಾ ನಿವೃತ್ತಿ ಬಳಿಕ ಸಮಾಜಮುಖಿಯಾಗಿ ಬದುಕು ಸಾಗಿಸುವುದು ಉತ್ತಮ’ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಗುರುಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈಜಣ್ಣ ಪುಲೆ ಅವರ ವಯೋನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ವೈಜಣ್ಣ ಪುಲೆ ಅವರು ಯುವಕರಿಗೆ ಮಾದರಿಯಾಗಿದ್ದಾರೆ. ಪುಲೆ ಅವರ ಬದುಕು ಬಡತನದಲ್ಲಿ ಕಳೆದಿದ್ದು, ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಸೇರಿಕೊಂಡು ಅಗತ್ಯ ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಲು ನೆರವಾಗಿದ್ದಾರೆ’ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಮಾತನಾಡಿದರು.
ತಹಶೀಲ್ದಾರ್ ಶಿವಾನಂದ ಮೇತ್ರೆ, ತೋಗಲೂರು ಪಿಡಿಒ ಸಿದ್ದಲಿಂಗಯ್ಯ, ಜಿ.ಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ರಾಜಕುಮಾರ ನಂದೋಡೆ, ಬೇಲೂರು ಗ್ರಾ.ಪಂ ಸದಸ್ಯ ರಾಮಲಿಂಗ ಸಾಯಗಾಂವೆ, ಯೋಜನಾ ಅಧಿಕಾರಿ ರಾಜಶೇಖರ ವಿಲ್ಲೆ, ಪೂಜಾ ಗಣೇಶ ಹರಕುಡೆ, ವಿಜಯಕುಮಾರ ತಾಂಬೂಳೆ, ಲೇಖಪಾಲಕ ಡಿಂಗಬರ, ಪಿಡಿಒ ಸಂದೀಪ ಬಿರಾದರ, ಹುಲಸೂರ ಪಿಡಿಒ ರಮೇಶ ಮಿಲಿಂದಕರ, ಮುಚಳಂಬ ಗ್ರಾಪಂ ಕಾರ್ಯದರ್ಶಿ ಬಸವರಾಜ ಬಾಲಕುಂದೆ, ಜ್ಞಾನೇಶ್ವರ ನಿಟ್ಟೂರೆ, ರಾಮಲಿಂಗ ಇದ್ದರು.
ಎ.ಡಿ ಮಹಾದೇವ ಜಮ್ಮು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಮದ್ ಸಲಿಂ ಸ್ವಾಗತಿಸಿದರು. ಬಸವರಾಜ ರೂಗಿ ಪ್ರಾರ್ಥಿಸಿದರು. ಮುಚಳಂಬ ಪಿಡಿಒ ಅರ್ಜುನ್ ಸಿಂಧೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.