
ಬೀದರ್: ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ತಾಲ್ಲೂಕಿನ ಚಿಟ್ಟಾ ಗ್ರಾಮದ ರೈತ ಪ್ರಭುರಾವ್ ಅವರ ಕುಟುಂಬದವರಿಗೆ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಬುಧವಾರ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
ದುರ್ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಹಾರದ ಆಶ್ವಾಸನೆ ನೀಡಿದ್ದೆ. ಅದರಂತೆ ಜೆಸ್ಕಾಂ ವತಿಯಿಂದ ಪರಿಹಾರ ಒದಗಿಸಲಾಗಿದೆ. ಈ ಪರಿಹಾರ ಧನವು ಸಂತ್ರಸ್ತ ಕುಟುಂಬದ ಸಂಕಷ್ಟದ ಸಮಯದಲ್ಲಿ ಸ್ವಲ್ಪ ಮಟ್ಟಿಗಾದರೂ ಆಸರೆಯಾಗಲಿ ಎಂದು ತಿಳಿಸಿದ್ದಾರೆ.
ಜೆಸ್ಕಾಂ ಅಧಿಕಾರಿಗಳಾದ ಪ್ರೇಮಕುಮಾರ್, ಅಬ್ದುಲ್ ಸೈಯದ್, ಮುಖಂಡರಾದ ರಾಜಕುಮಾರ್ ಪಾಟೀಲ, ವಿದ್ಯಾಸಾಗರ ಸ್ವಾಮಿ, ಆನಂದ ಪಾಟೀಲ, ಶಿವಕುಮಾರ್ ಪಾಟೀಲ, ಶರಣು ಸ್ವಾಮಿ, ಶಿವಕುಮಾರ್ ಕೆ., ಶಿವರಾಜ ಪಾಟೀಲ, ಸೋಮು ಪಾಟೀಲ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.