ADVERTISEMENT

ರೈತರಿಂದ ಜಿಂಕೆಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 13:25 IST
Last Updated 29 ಜೂನ್ 2020, 13:25 IST
ಔರಾದ್ ತಾಲ್ಲೂಕಿನ ನಾಗೂರದಲ್ಲಿ ನಾಯಿ ಹಿಂಡಿನಿಂದ ರಕ್ಷಿಸಿದ ಜಿಂಕೆಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಲಾಯಿತು
ಔರಾದ್ ತಾಲ್ಲೂಕಿನ ನಾಗೂರದಲ್ಲಿ ನಾಯಿ ಹಿಂಡಿನಿಂದ ರಕ್ಷಿಸಿದ ಜಿಂಕೆಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಲಾಯಿತು   

ಔರಾದ್: ತಾಲ್ಲೂಕಿನ ನಾಗೂರ (ಎಂ) ಗ್ರಾಮದ ರೈತ ಜ್ಞಾನೋಬಾ ಬಿರಾದಾರ ನಾಯಿಗಳಿಂದ ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ.

ಭಾನುವಾರ ಸಂಜೆ ಆಹಾರ ಅರಸಿ ಬಂದ ಜಿಂಕೆಗಳ ಗುಂಪಿನ ಮೇಲೆ ನಾಯಿ ಹಿಂಡು ದಾಳಿ ಮಾಡಿದೆ. ನಾಲ್ಕು ಜಿಂಕೆಗಳು ತಪ್ಪಿಸಿಕೊಂಡು ಓಡಿ ಹೋಗಿವೆ. ಮರಿ ಜಿಂಕೆ ಅಲ್ಲೇ ಸಿಕ್ಕಿ ಬಿದ್ದಿದೆ. ಇದನ್ನು ಗಮನಿಸಿದ ರೈತ ಜ್ಞಾನೋಬಾ ನಾಯಿಗಳನ್ನು ಹೊಡೆದೊಡಿಸಿ ಜಿಂಕೆ ರಕ್ಷಣೆ ಮಾಡಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT