ADVERTISEMENT

ವಿಷ ಸೇವಿಸಿ ಮದಕಟ್ಟಿ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:28 IST
Last Updated 20 ಸೆಪ್ಟೆಂಬರ್ 2020, 2:28 IST
ಬಸವಕಲ್ಯಾಣದ ತಹಶೀಲ್ದಾರ್ ಸಂಗಯ್ಯಸ್ವಾಮಿ ಅವರಿಗೆ ಹುಲಸೂರ ಕೆರೆ ಒಡೆದು ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ ಭೂಸಾರೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು
ಬಸವಕಲ್ಯಾಣದ ತಹಶೀಲ್ದಾರ್ ಸಂಗಯ್ಯಸ್ವಾಮಿ ಅವರಿಗೆ ಹುಲಸೂರ ಕೆರೆ ಒಡೆದು ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ ಭೂಸಾರೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು   

ಭಾಲ್ಕಿ: ತಾಲ್ಲೂಕಿನ ಮದಕಟ್ಟಿ ಗ್ರಾಮದಲ್ಲಿ ಈಚೆಗೆ ಕೃಷಿ ಚಟುವಟಿಕೆಗಾಗಿ ಮಾಡಿದ ಸಾಲ ತೀರಿಸಲಾಗದೇ ರೈತ ಧನರಾಜ ಬಸಪ್ಪ ವರವಟ್ಟೆ (65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರಿಗೆ 1.10 ಎಕರೆ ಕೃಷಿ ಜಮೀನಿದ್ದು, ಬಿತ್ತನೆ ಹಾಗೂ ಉಳುಮೆಗಾಗಿ ದಾಡಗಿ ಪಿಕೆಪಿಎಸ್‍ನಲ್ಲಿ ₹20 ಸಾವಿರ ಹಾಗೂ ಖಾಸಗಿ ಸಾಲ ಮಾಡಿದ್ದರು. ಅತಿವೃಷ್ಟಿಯಿಂದ ಮುಂಗಾರಿನ ಹೆಸರು ಬೆಳೆ ಫಸಲು ಕೈಕೊಟ್ಟಿರುವ ಪರಿಣಾಮ ಸಾಲ ತೀರಿಸುವ ಚಿಂತೆಯಲ್ಲಿ ಮನೆಯಲ್ಲಿ ಹೆಸರು ಬೆಳೆಗೆ ಸಿಂಪರಣೆಗಿಟ್ಟದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ಅವರನ್ನು ತಕ್ಷಣ ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೀದರ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಈ ಕುರಿತು ಮೃತ ರೈತನ ಪತ್ನಿ ಶಾರಾದಾಬಾಯಿ ನೀಡಿರುವ ದೂರಿನ ಮೇರೆಗೆ ಖಟಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.