ADVERTISEMENT

ಗುಜರಿ ಅಂಗಡಿ ಬೆಂಕಿ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 16:16 IST
Last Updated 9 ಡಿಸೆಂಬರ್ 2018, 16:16 IST
ಬೀದರ್‌ನ ಹೈದರಾಬಾದ್‌ ರಸ್ತೆಯ ಪಕ್ಕದಲ್ಲಿರುವ ದೊಡ್ಡ ಗುಜರಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದ ದೃಶ್ಯ
ಬೀದರ್‌ನ ಹೈದರಾಬಾದ್‌ ರಸ್ತೆಯ ಪಕ್ಕದಲ್ಲಿರುವ ದೊಡ್ಡ ಗುಜರಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದ ದೃಶ್ಯ   

ಬೀದರ್: ನಗರದ ಹೈದರಾಬಾದ್‌ ರಸ್ತೆಯ ಬದಿಯಲ್ಲಿರುವ ಗೃಹ ಬಳಕೆ ಸಾಮಗ್ರಿಗಳ ಗುಜರಿ ಅಂಗಡಿಗೆ ಭಾನುವಾರ ಸಂಜೆ ಬೆಂಕಿ ಹತ್ತಿಕೊಂಡು ಅಪಾರ ಹಾನಿಯಾಗಿದೆ.

ಸಂಜೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಅಂಗಡಿ ತುಂಬ ಆವರಿಸಿಕೊಂಡಿತು. ಗಾಬರಿಗೊಂಡ ಸ್ಥಳೀಯರು ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಷ್ಟರಲ್ಲಿ ಅಂಗಡಿಯಲ್ಲಿದ್ದ ಕುರ್ಚಿ, ಟೇಬಲ್, ಗ್ಲಾಸ್, ಎಲ್ ಸಿಡಿ ಟಿವಿ, ಸೌಂಡ್ ಬಾಕ್ಸ್‌ಗಳು ಸುಟ್ಟು ಕರಕಲಾಗಿದ್ದವು. ಮಾರ್ಕೆಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.