ADVERTISEMENT

ಸಂತ್ರಸ್ತ ತಾಯಂದಿರಿಗೆ ಆಹಾರ ಕಿಟ್

ಖಲೀಲುಲ್ಲ ಗೆಳೆಯರ ಬಳಗದಿಂದ ವಿಶ್ವ ತಾಯಂದಿರ ಅರ್ಥಪೂರ್ಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 6:06 IST
Last Updated 10 ಮೇ 2021, 6:06 IST
ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮದಲ್ಲಿ ಖಾಜಾ ಖಲೀಲುಲ್ಲ ಗೆಳೆಯರ ಬಳಗ ಬಡ ತಾಯಿಂದಿರಿಗೆ ಆಹಾರದ ಕಿಟ್ ವಿತರಿಸಿದರು
ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮದಲ್ಲಿ ಖಾಜಾ ಖಲೀಲುಲ್ಲ ಗೆಳೆಯರ ಬಳಗ ಬಡ ತಾಯಿಂದಿರಿಗೆ ಆಹಾರದ ಕಿಟ್ ವಿತರಿಸಿದರು   

ಔರಾದ್: ತಾಲ್ಲೂಕಿನ ವಡಗಾಂವ್ ಗ್ರಾಮದ ಖಾಜಾ ಖಲೀಲುಲ್ಲ ಗೆಳೆಯರ ಬಳಗದ ವತಿಯಿಂದ ಭಾನುವಾರ ಲಾಕ್‍ಡೌನ್ ಸಂತ್ರಸ್ತ ತಾಯಿಂದಿರಿಗೆ ಆಹಾರದ ಕಿಟ್ ವಿತರಿಸಿದರು.

ವಿಶ್ವ ತಾಯಿಂದಿರ ದಿನಾಚರಣೆ ಅಂಗವಾಗಿ ಗ್ರಾಮದ 15 ಕೂಲಿ ಕಾರ್ಮಿಕ ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ, 5 ಕೆ.ಜಿ ಗೋಧಿ ಇರುವ ಕಿಟ್ ಅವರ ಮನೆ ಬಾಗಿಲಿಗೆ ತಲುಪಿಸಿದರು.

ಕಳೆದ ವರ್ಷದ ಲಾಕ್‍ಡೌನ್ ನಂತರ ನಮಗೆ ಸರಿಯಾಗಿ ಕೆಲಸ ಸಿಗತ್ತಿಲ್ಲ. ಈ ವರ್ಷ 15 ದಿನಗಳಿಂದ ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿದ್ದೇವೆ. ಹೀಗಾಗಿ ಕುಟುಂಬ ನಡೆಸುವುದು ದುಸ್ತರವಾಗಿದೆ. ಇಂತಹ ವೇಳೆ ಗ್ರಾಮದ ಯುವಕರು ನಮಗೆ ಆಹಾರದ ಕಿಟ್ ನೀಡಿ ಪುಣ್ಣ ಕಟ್ಟಿಕೊಂಡಿದ್ದಾರೆ ಎಂದು ವಡಗಾಂವ್ ಗ್ರಾಮದ ಕೂಲಿ ಕಾರ್ಮಿಕ ಮಹಿಳೆಯರು ತಿಳಿಸಿದ್ದಾರೆ.

ADVERTISEMENT

‘ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲ ಅವರು ಪ್ರತಿ ವರ್ಷ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನಿಸುವ ಮೂಲಕ ವಿಶ್ವ ತಾಯಿಂದಿರ ದಿನ ಆಚರಿಸುತ್ತಾರೆ. ಈ ವರ್ಷ ಅವರು ತಮ್ಮ ಗೆಳೆಯರ ಬಳಗದವರೊಂದಿಗೆ ಚರ್ಚಿಸಿ ಲಾಕ್‍ಡೌನ್‍ನಿಂದ ಸಂತ್ರಸ್ತ ಕಾರ್ಮಿಕ ಮಹಿಳೆಯರಿಗೆ ಆಹಾರ ನೀಡುವ ಮಾನವೀಯ ಕೆಲಸಕ್ಕೆ ಕೈ ಹಾಕಿರುವುದು ಮಾದರಿಯಾಗಿದೆ’ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದ್ದಾರೆ.

‘ನಾನು ಅತಿ ಕಡು ಬಡತನದಿಂದ ಬಂದು ಕೆಎಎಸ್ ಅಧಿಕಾರಿಯಾಗಿದ್ದೇನೆ. ಬೀದರ್‌ನ ಲಕ್ಷ್ಮಿಬಾಯಿ ಕಮಠಾಣೆ ಕಾಲೇಜಿನ ಉಪನ್ಯಾಸಕಿ ನನ್ನ ತಾಯಿ ಸ್ವರೂಪಿ ಲತಾ ದಂಡೆ ನನಗೆ ಪ್ರೇರಕಶಕ್ತಿ. ಅವರ ಮೇಲಿದ್ದ ಅಭಿಮಾನದ ಪ್ರತೀಕವಾಗಿ ನಾನು ಪ್ರತಿವರ್ಷ ವಿಶ್ವ ತಾಯಿಂದಿರ ದಿನ ಆಚರಿಸುತ್ತೇನೆ. ಈ ವರ್ಷ ನಮ್ಮ ಊರಿನ ಸುತ್ತಮುತ್ತಲಿನ ಬಡ ತಾಯಿಂದಿರನ್ನು ಗುರುತಿಸಿ ಅವರಿಗೆ ಆಹಾರ ಮತ್ತು ಅವರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಕೊಡುವ ಕಾರ್ಯಕ್ಕೆ ಕೈ ಹಾಕಿದ್ದೇವೆ. ನಮ್ಮ ಊರಿನ ಇತರೆ ಸರ್ಕಾರಿ ನೌಕರರು ಹಾಗೂ ವಿದ್ಯಾವಂತ ಸಾಮಾಜಿಕ ಕಳಕಳಿ ಇರುವವರು ನನ್ನ ಜತೆ ಕೈಜೋಡಿಸಿದ್ದಾರೆ’ ಎಂದು ವಡಗಾಂವ್ ಗ್ರಾಮದವರಾದ ಯಾದಗಿರಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಖಾಜಾ ಖಲೀಲುಲ್ಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.