ADVERTISEMENT

ಬೀದರ್: ವಿವೇಕಾನಂದ ಧ್ಯಾನ ಕುಟೀರಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:25 IST
Last Updated 6 ಆಗಸ್ಟ್ 2025, 5:25 IST
ಧ್ಯಾನ ಕುಟೀರಕ್ಕೆ ಜ್ಯೋತಿರ್ಮಯಾನಂದ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು
ಧ್ಯಾನ ಕುಟೀರಕ್ಕೆ ಜ್ಯೋತಿರ್ಮಯಾನಂದ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು    

ಬೀದರ್: ಇಲ್ಲಿನ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮ ಪರಿಸರದಲ್ಲಿ ನಿರ್ಮಿಸುತ್ತಿರುವ ವಿವೇಕಾನಂದ ಧ್ಯಾನ ಕುಟೀರಕ್ಕೆ ಸೋಮವಾರ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು.

ಸ್ವಾಮೀಜಿ ಮಾತನಾಡಿ, ಯೋಗ, ಧ್ಯಾನ, ಪ್ರಾಕೃತಿಕ ಚಿಕಿತ್ಸೆ ಮತ್ತು ಆಯುರ್ವೇದಿಕ್ ಜೀವನ ಪದ್ಧತಿಯಿಂದ ದುಃಖಿಯನ್ನು ಸುಖಿಯಾಗಿಸುವ, ಅಜ್ಞಾನಿಗೆ ಜ್ಞಾನಿಯಾಗಿಸುವ ಮತ್ತು ರೋಗಿಗೆ ನಿರೋಗಿಯಾಗಿಸಿ ಪರಮ ಯೋಗಿಯನ್ನಾಗಿಸುವ ಚಮತ್ಕಾರಿ ಸೂತ್ರಗಳನ್ನು ನಮ್ಮ ಪೂರ್ವಜರು ಕೊಟ್ಟಿದ್ದಾರೆ. ಆ ಸೂತ್ರಗಳಂತೆ ಮಾನವನ ಒತ್ತಡ ಬದುಕಿನ ಸಮಗ್ರ ಪರಿವರ್ತನೆಗಾಗಿ ಭಕ್ತರ ಅಪೇಕ್ಷೆ ಮತ್ತು ನೆರವಿನಿಂದ ಇಲ್ಲಿ ಧ್ಯಾನ ಕುಟೀರ ಸ್ಥಾಪಿಸಲಾಗುತ್ತಿದೆ. 2026ರ ಜನವರಿ 12ರಂದು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಆಯುರ್ವೇದ, ನೈಸರ್ಗಿಕ ಚಿಕಿತ್ಸೆ ಜೊತೆಗೆ ನಿರಂತರ ಯೋಗ, ಧ್ಯಾನ ತರಗತಿಗಳನ್ನು ನಡೆಸುವ ಉದ್ದೇಶದಿಂದ ಆಶ್ರಮದಿಂದ ಸ್ವಾಮಿ ವಿವೇಕಾನಂದ ಆರೋಗ್ಯ ಧಾಮ ಆಯುರ್ವೇದಿಕ್ ಆಸ್ಪತ್ರೆಯನ್ನು ಸೆಪ್ಟೆಂಬರ್‌ 11ರಂದು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

ADVERTISEMENT

ಇಂದಿನ ಹಾಗೂ ಮುಂದಿನ ಜನಾಂಗವನ್ನು ಯೋಗ ಮತ್ತು ಧ್ಯಾನದ ದಿವ್ಯ ಶಕ್ತಿಯಿಂದ ಖಿನ್ನತೆ, ಒತ್ತಡ, ರೋಗಗಳಿಂದ ಮುಕ್ತರಾಗಿಸಿ ಸದೃಢ ಭಾರತವನ್ನು ಕಟ್ಟುವ ಬಹುದೊಡ್ಡ ಹೊಣೆ ನಮ್ಮೆಲ್ಲರ ಮೇಲಿದೆ. ಇಂದಿನ ಬದಲಾದ ಆಧುನಿಕ ಜೀವನ ಶೈಲಿ ಮತ್ತು ಆಹಾರ ಶೈಲಿ ಪ್ರತಿಯೊಬ್ಬರ ಆರೋಗ್ಯಕ್ಕೆ ಕುತ್ತಾಗಿ ಪರಿಣಮಿಸಿದೆ ಎಂದರು.

ಪತ್ರಕರ್ತ ಸದಾನಂದ ಜೋಶಿ, ಪ್ರಮುಖರಾದ ಅನೀತಾ ಪಾಟೀಲ್, ಪದ್ಮಜಾ ವಿಶ್ವಕರ್ಮ, ಅಂಬುಜಾ ವಿಶ್ವಕರ್ಮ, ಜಯಪ್ರಕಾಶ ಪೊದ್ದಾರ್, ಚನ್ನಬಸವ ಹೇಡೆ, ನಿತಿನ್ ಕರ್ಪೂರ್‌, ಸಿದ್ದನಗೌಡ, ಗುಣವಂತ ರಾಜೋಳೆ, ಹಾವಗಿರಾವ ಕಳಸೆ, ಬಸವರಾಜ ಬುನ್ನಾ, ನಾಗಶೆಟ್ಟಿ, ಶ್ರದ್ಧಾ, ಗೋರಖನಾಥ, ಗುರುನಾಥ ರಾಜಗೀರಾ, ಸಚಿದಾನಂದ ಚಿದ್ರೆ, ಸತ್ಯಪ್ರಕಾಶ, ಜಗದೀಶ ಮುಖೇಡಕರ್, ಗಣೇಶ ಕಳಸೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.