ADVERTISEMENT

ಆರು ಗ್ರಾಮಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ವಿ.ಎಂ.ರಾಂಪುರೆ ಪಬ್ಲಿಕ್ ಸ್ಕೂಲ್

ವಿ.ಎಂ.ರಾಂಪುರೆ ಪಬ್ಲಿಕ್ ಸ್ಕೂಲ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 15:52 IST
Last Updated 16 ಮಾರ್ಚ್ 2022, 15:52 IST
ಮಹೇಶ ರಾಂಪುರೆ
ಮಹೇಶ ರಾಂಪುರೆ   

ಜನವಾಡ: ಆರು ಗಡಿ ಗ್ರಾಮಗಳ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನಲ್ಲಿ ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸುವುದಾಗಿ ಬೀದರ್ ತಾಲ್ಲೂಕಿನ ಹಮಿಲಾಪುರ ಗ್ರಾಮದ ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆ ಘೋಷಿಸಿದೆ.

ಸುಲ್ತಾನಪುರ, ಜಾಂಪಾಡ, ಅಷ್ಟೂರು, ಇಮಾಮಬಾದ್ ಹಳ್ಳಿ, ಜಾಂಪಾಡ, ಚಿಲ್ಲರ್ಗಿ ಗ್ರಾಮಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮಹೇಶ ಎಸ್. ರಾಂಪುರೆ ತಿಳಿಸಿದ್ದಾರೆ.

ಗಡಿ ಭಾಗದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವುದು ಉಚಿತ ಪ್ರವೇಶದ ಉದ್ದೇಶವಾಗಿದೆ. ಗಡಿ ಗ್ರಾಮಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಯು ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಪಾಲಕರ ಭಾರ ಕಡಿಮೆ ಮಾಡಲು ಎರಡು ವರ್ಷಗಳಲ್ಲಿ ಒಟ್ಟು 65 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಿತ್ತು ಎಂದು ತಿಳಿಸಿದ್ದಾರೆ.

2020-21 ರಲ್ಲಿ ಸಿಕಿಂದ್ರಾಪುರ, ಹಮಿಲಾಪುರ, ನೌಬಾದ್, ಮೀರಾಗಂಜ್, ಅಲ್ಲಾಪುರ, ಮರಕಲ್, ವಾಲ್ದೊಡ್ಡಿ, ಚಂದಾಪುರ, ಅಗ್ರಹಾರ ಗ್ರಾಮಗಳ ಒಟ್ಟು 40 ಹಾಗೂ 2021-22ನೇ ಸಾಲಿನಲ್ಲಿ ಚಿಕ್ಕಪೇಟೆ, ಗುಮ್ಮಾ, ಶ್ರೀಮಂಡಲ್, ಬೀದರ್‌ನ ನಾವದಗೇರಿ, ಬರೀದ್ ಶಾಹಿ ಉದ್ಯಾನ ಪ್ರದೇಶ, ನಂದಗಾಂವ್, ಮಿರ್ಜಾಪುರ ಕೆ, ನ್ಯಾಮತಾಬಾದ್ ಹಾಗೂ ಅಗ್ರಹಾರ ಗ್ರಾಮಗಳ 25 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.