ಕಮಲನಗರ: ‘ಸರ್ಕಾರಿ ನೌಕರರ ಭವನ ನಿರ್ಮಾಣ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳ ನಿರ್ಮಾಣ, ತಾಲ್ಲೂಕು ಕೇಂದ್ರಗಳಲ್ಲಿ ಇಲಾಖೆ ಕಾರ್ಯಾಲಯಗಳ ಸ್ಥಾಪನೆ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಶಾಸಕ ಪ್ರಭು ಚವ್ಹಾಣ ಭರವಸೆ ನೀಡಿದರು.
ಪಟ್ಟಣದ ಸಂಗಮೇಶ್ವರ ಕಲ್ಯಾಣಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ವತಿಯಿಂದ ಶನಿವಾರ ಪದಾಧಿಕಾರಿಗಳ ಪದಗ್ರಹಣ, ಮಹಿಳಾ ದಿನಾಚರಣೆ ಮತ್ತು ನೌಕರರ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಇಲಾಖೆ ಜತೆಗೆ ಇನ್ನಿತರ ಇಲಾಖೆಗಳು ಕೈ ಜೋಡಿಸಬೇಕು. ಶೈಕ್ಷಣಿಕ ವಾತಾವರಣ ರೂಪಿಸಿದಲ್ಲಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುನೀಲ ಕಸ್ತೂರೆ ಪ್ರಾಸ್ತಾವಿಕವಾಗಿ ಮಾತನಾಡಿ, ‘ನೌಕರರ ಬೇಡಿಕೆ ಮತ್ತು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ‘ಸರ್ಕಾರಿ ನೌಕರರು ಕಾಯಕದಲ್ಲಿ ಮಗ್ನರಾಗಿರಬೇಕು. ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಜೀವನದಲ್ಲಿ ಸಂತಸ ಮತ್ತು ಪ್ರಶಂಸೆಗೆ ಪಾತ್ರರಾಗುತ್ತೀರಿ. ಹೃದಯ ಭಿನ್ನವಾಗಬಾರದು. ಭಿನ್ನತೆಯಲ್ಲಿ ಎಕತೆ ಸಾಧಿಸಿ ಸರ್ಕಾರದ ಕೆಲಸದ ಜತೆ ಸಂಸಾರದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬಸವಣ್ಣನವರ ಅಧ್ಯಾತ್ಮಿಕ ಚಿಂತನೆಗಳು ನಿಮ್ಮೆಲ್ಲರ ಬದುಕಿಗೆ ನವ ಚೇತನ ನೀಡಲಿ’ ಎಂದು ಆಶೀರ್ವದಿಸಿದರು.
ಸಾಹಿತಿ ಪಾರ್ವತಿ ವಿಜಯಕುಮಾರ ಸೋನಾರೆ ವಿಶೇಷ ಉಪನ್ಯಾಸ ನೀಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾ.ಪಂ.ಇಒ ಮಾಣಿಕರಾವ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಬಿಜೆ ರಂಗೇಶ, ಗ್ರಾ.ಪಂ.ಅಧ್ಯಕ್ಷೆ ಸುಶೀಲಾಬಾಯಿ ಮಹೇಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ ಡಿ.ಕೆ., ಚಿಟಗುಪ್ಪ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಶೇಖರ ಉಪ್ಪಿನ, ಔರಾದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಂಢರಿ ಆಡೆ, ಕಸಾಪ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ ಹಾಗೂ ಇನ್ನಿತರರಿದ್ದರು.
ವಿದ್ಯಾಸಾಗರ ಪಾಂಚವರೆ, ರಾಜಕುಮಾರ ವಡಗಾವೆ, ಶಾಂತಕುಮಾರ ಗುಡಮೆ, ದತ್ತಾತ್ರೆ ಮಡಿವಾಳ, ನವನಾಥ ಗಾಯಕವಾಡ, ಸಂಗೀತಾ ಸಜ್ಜನಶೆಟ್ಟಿ, ಮುಜಿಬುರ್ ರೆಹಮಾನ್, ಡಾ.ಫೈಜಲ್, ಡಾ.ಸಂಗಮೇಶ್ವರ, ಸಂಜುಕುಮಾರ ಮೇತ್ರೆ, ಗೋಪಾಲಕೃಷ್ಣ, ಬಾಬು ರಾಜೋಳಕರ, ಶಿವಲಿಂಗಪ್ಪ, ಔರಾದ್ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪಂಡರಿ ಆಡೆ, ಕಸಾಪ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ಡೋಣಗಾಂವ(ಎಂ) ಸಿಆರ್‌ಸಿ ರಮಾಕಾಂತ ಕಾಳೆ, ಸಂದೇಶ ಘಾಗರೆ, ಗಣಪತರಾವ ದೇವಕತೆ, ರವಿ ಹೋರಂಡೆ, ದಶರಥ ಔರಾದೆ, ರಬ್ಬಾಣಿ ಶೇಕ್, ಡಾ.ಪವನ ನಿಡೋದಾ, ಧೋಂಡಿಬಾ, ವಾಗಂಭರ ಗಾಯಕವಾಡ, ಶೈಲೇಶ ಮಾಳಗೆ, ರೇಣುಕಾ, ಶೈಲಶ್ರೀ, ಬನಸಂಕರಿ, ಲಕ್ಷ್ಮಿ, ಸವಿತಾ ರಾಂಪೂರೆ, ದಯಾನಂದ ರಾಜೋಳೆ, ಪ್ರಭಾವತಿ, ಭಾಗ್ಯಶ್ರೀ ಬಿರಾದಾರ, ಮಾದಪ್ಪ ಮಡಿವಾಳ, ಶ್ರೀಕಾಂತ ರಾಠೋಡ, ಶಿವಾನಂದ ನವಾಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಅನಿತಾ ಗೋರಟೆ ಸ್ವಾಗತ ಗೀತೆ ನುಡಿದರು. ಸ್ವಾತಿ ಮತ್ತು ಸಂಗಡಿಗರು ನೃತ್ಯ ಮಾಡಿದರು. ರಾಜಕುಮಾರ ವಡಗಾವೆ ಸ್ವಾಗತಿಸಿದರು. ರೋಹಿದಾಸ ಮೇತ್ರೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.