ADVERTISEMENT

ಗಿರೀಶ್ ಕಾರ್ನಾಡ್ ಅಪ್ರತಿಮ ಸಾಹಿತಿ

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 13:40 IST
Last Updated 10 ಜೂನ್ 2019, 13:40 IST
ಬೀದರ್‌ನಲ್ಲಿ ಸೋಮವಾರ ನಡೆದ ಗಿರೀಶ್ ಕಾರ್ನಾಡ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ವೀರಶೆಟ್ಟಿ ಚನಶೆಟ್ಟಿ, ಸುರೇಶ ಚನಶೆಟ್ಟಿ, ಎಂ. ಜಿ. ಗಂಗನಪಳ್ಳಿ, ಬಸವರಾಜ ಬಲ್ಲೂರ, ಸಚಿನ್ ವಿಶ್ವಕರ್ಮ ಇದ್ದಾರೆ
ಬೀದರ್‌ನಲ್ಲಿ ಸೋಮವಾರ ನಡೆದ ಗಿರೀಶ್ ಕಾರ್ನಾಡ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ವೀರಶೆಟ್ಟಿ ಚನಶೆಟ್ಟಿ, ಸುರೇಶ ಚನಶೆಟ್ಟಿ, ಎಂ. ಜಿ. ಗಂಗನಪಳ್ಳಿ, ಬಸವರಾಜ ಬಲ್ಲೂರ, ಸಚಿನ್ ವಿಶ್ವಕರ್ಮ ಇದ್ದಾರೆ   

ಬೀದರ್: ‘ವಿಚಾರವಾದಿ, ಪ್ರಗತಿಪರ ಚಿಂತಕ ಗಿರೀಶ ಕಾರ್ನಾಡ ಕನ್ನಡಕ್ಕೆ ಜ್ಷಾನಪೀಠ ಪ್ರಶಸ್ತಿ ತಂದುಕೊಡುವುದರ ಜೊತೆಗೆ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದರು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ಜಿಲ್ಲಾ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಕರ್ನಾಟಕ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ ಗಿರೀಶ್ ಕಾರ್ನಾಡ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿರೀಶ ಕಾರ್ನಾಡ ಅಪ್ರತಿಮ ಸಾಹಿತಿಯಾಗಿದ್ದರು ಎಂದರು.

‘ಸಾಹಿತ್ಯ, ರಂಗಭೂಮಿ, ಚಲನಚಿತ್ರ ನಟ, ನಿರ್ದೇಶಕರಾಗಿ ಕನ್ನಡಕ್ಕೆ ಬಹತ್ವ ತಂದು ಕೊಟ್ಟಕೀರ್ತಿ ಕಾರ್ನಾಡ್ ಅವರಿಗೆ ಸಲ್ಲುತ್ತದೆ’ ಎಂದು ಬಣ್ಣಿಸಿದರು.

ADVERTISEMENT

ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ಮಾತನಾಡಿ, ‘ಕಾರ್ನಾಡ ಅವರು ಜಾನಪದ ಕಥೆಗಳ ಮೂಲಕ ಆಧುನಿಕತೆಯನ್ನು ಮುಖಾಮುಖಿಗೊಳಿಸಿದರು. ಚಾರಿತ್ರಿಕ ಸಂಗತಿಗಳನ್ನು ಅನಾವರಣಗೊಳಿಸುವ ಮೂಲಕ ಕನ್ನಡ ನಾಟಕಗಳಿಗೆ ಹೊಸ ಆಯಾಮ ತಂದುಕೊಟ್ಟರು’ ಎಂದು ಹೇಳಿದರು.

ಹಿರಿಯ ಸಾಹಿತಿ ಎಂ. ಜಿ. ಗಂಗನಪಳ್ಳಿ ವಿಶೇಷ ಉಪನ್ಯಾಸ ನೀಡಿದರು, ಉಪನ್ಯಾಸಕ ಸಚಿನ್ ವಿಶ್ವಕರ್ಮ ನಿರೂಪಿಸಿದರು. ಕಸಾಪ ತಾಲ್ಲೂಕು ಘಟಕದ ಕೋಶಾಧ್ಯಕ್ಷ ವೀರಶೆಟ್ಟಿ ಚನಶೆಟ್ಟಿ ವಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.