ADVERTISEMENT

ಹುತ್ತದ ಬದಲಿಗೆ ಬಡ ಮಕ್ಕಳಿಗೆ ಹಾಲು ನೀಡಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 14:28 IST
Last Updated 15 ಆಗಸ್ಟ್ 2021, 14:28 IST
ಬೀದರ್‍ನ ರಾಜಗೊಂಡ ಕಾಲೊನಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆ ವತಿಯಿಂದ ಬಡ ಮಕ್ಕಳಿಗೆ ಹಾಲು ವಿತರಿಸಲಾಯಿತು
ಬೀದರ್‍ನ ರಾಜಗೊಂಡ ಕಾಲೊನಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆ ವತಿಯಿಂದ ಬಡ ಮಕ್ಕಳಿಗೆ ಹಾಲು ವಿತರಿಸಲಾಯಿತು   

ಬೀದರ್: ಹುತ್ತಗಳಿಗೆ ಹಾಲು ಎರೆಯುವ ಬದಲು ಬಡ ಮಕ್ಕಳಿಗೆ ನೀಡಬೇಕು ಎಂದು ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ ಲತಾ ಬಿ.ರಾಠೋಡ್ ಹೇಳಿದರು.

ನಗರದ ರಾಜಗೊಂಡ ಕಾಲೊನಿಯಲ್ಲಿ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯಿಂದ 200ಕ್ಕೂ ಹೆಚ್ಚು ಬಡ ಮಕ್ಕಳಿಗೆ ನಾಗರ ಪಂಚಮಿ ನಿಮಿತ್ತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಾವುಗಳಿಗೆ ಹಾಲು ಕೊಡುವುದು ವೈಜ್ಞಾನಿಕ ಕ್ರಮವಲ್ಲ. ಬದಲಿಗೆ ಬಡ ಮಕ್ಕಳಿಗೆ ನೀಡಿದರೆ ಅವರ ಹೊಟ್ಟೆ ತುಂಬುತ್ತದೆ ಎಂದರು.

ADVERTISEMENT

ಮಮ್ಲಾಜ್, ಸುದರ್ಶನ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.