ADVERTISEMENT

ಗ್ಲೋಬಲ್ ಸೈನಿಕ ಅಕಾಡೆಮಿ: ನೀಮಾಗೆ ಶೇ 97 ಅಂಕ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:37 IST
Last Updated 10 ಆಗಸ್ಟ್ 2021, 15:37 IST
ನೀಮಾ ಪೃಥ್ವಿರಾಜ್
ನೀಮಾ ಪೃಥ್ವಿರಾಜ್   


ಬೀದರ್: ಇಲ್ಲಿಯ ಗ್ಲೋಬಲ್ ಅಕಾಡೆಮಿ ಶಾಲೆಯ ವಿದ್ಯಾರ್ಥಿನಿ ನೀಮಾ ಪೃಥ್ವಿರಾಜ್ ಹಾಲಪ್ಪಗೋಳ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 97 ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಮೊದಲ ಬ್ಯಾಚ್‍ನಲ್ಲೇ ಶಾಲೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಗಳಿಸಿದೆ ಎಂದು ಅಕಾಡೆಮಿಯ ಅಧ್ಯಕ್ಷ ರ್ಕನಲ್ ಶರಣಪ್ಪ ಸಿಕೇನಪುರೆ ತಿಳಿಸಿದ್ದಾರೆ.

***

ವಿದ್ಯಾರಣ್ಯ ಶಾಲೆಗೆ ವಿಶಾಲ್ ಮನೋಹರ ಪ್ರಥಮ

ADVERTISEMENT


ಬೀದರ್: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿಯ ವಿದ್ಯಾರಣ್ಯ ಪ್ರೌಢಶಾಲೆ ಉತ್ತಮ ಸಾಧನೆ ಮಾಡಿದೆ.
ಶಾಲೆಗೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಲಭಿಸಿದೆ. 13 ವಿದ್ಯಾರ್ಥಿಗಳು ಎ ಪ್ಲಸ್ ಶ್ರೇಣಿ ಪಡೆದಿದ್ದಾರೆ. ವಿಶಾಲ್ ಮನೋಹರ ಶೇ 98.72 ರಷ್ಟು ಅಂಕ ಗಳಿಸಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಸಚಿನ್ ಚಂದ್ರಕಾಂತ ಶೇ 97.44, ಆದಿತ್ಯ ತೇಲಂಗ ಶೇ 97.12, ದೇವಿಕಾ ಸಂಗಪ್ಪ ಶೇ 96.32 ರಷ್ಟು ಅಂಕ ಗಳಿಸಿದ್ದಾರೆ ಎಂದು ಮುಖ್ಯ ಶಿಕ್ಷಕಿ ಪ್ರತಿಭಾ ಚಾಮಾ ತಿಳಿಸಿದ್ದಾರೆ.

* * *

ಅರುಣೋದಯ ಶಾಲೆಗೆ ಶೇ 100 ಫಲಿತಾಂಶ


ಬೀದರ್: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿಯ ಅರುಣೋದಯ ಪ್ರೌಢಶಾಲೆಗೆ ಶೇ 100ಕ್ಕೆ 100 ರಷ್ಟು ಫಲಿತಾಶ ದೊರೆತಿದೆ.


8 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಮರ ನಾಗಣ್ಣ ಶೇ 92.64, ದೀಪಿಕಾ ಚಂದ್ರಕಾಂತ ಶೇ 92.32, ದೀಪಿಕಾ ಸುನೀಲಕುಮಾರ ಶೇ 89.12, ಶಿವಾನಿ ಸುನೀಲ್ ಗೌಳಿ ಶೇ 89.12, ಪರಮೇಶ್ವರ ರವೀಂದ್ರ ಶೇ 88.32, ಪುನೀತ್‍ರೆಡ್ಡಿ ರಮೇಶರೆಡ್ಡಿ, ಶೇ 85.92, ಅರ್ಪಿತಾ ಅಶೋಕ ಶೇ 85.92, ನಾಗೇಶ ಜಗನ್ನಾಥ ಶೇ 85.12 ರಷ್ಟು ಅಂಕ ಗಳಿಸಿ ಸಾಧನೆಗೈದಿದ್ದಾರೆ ಎಂದು ಶಾಲೆ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.