ADVERTISEMENT

ಜೇನು ಕೃಷಿಯಿಂದ ಉತ್ತಮ ಲಾಭ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 14:43 IST
Last Updated 29 ನವೆಂಬರ್ 2021, 14:43 IST
ಬೀದರ್‌ನ ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ನಡೆದ ಜೇನು ಕೃಷಿ ಕುರಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ರೈತರು
ಬೀದರ್‌ನ ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ನಡೆದ ಜೇನು ಕೃಷಿ ಕುರಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ರೈತರು   

ಬೀದರ್: ಜೇನು ಕೃಷಿಯಿಂದ ರೈತರು ಉತ್ತಮ ಆದಾಯ ಪಡೆಯಬಹುದು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ಸಂತೋಷಕುಮಾರ ಹೇಳಿದರು.

ಇಲ್ಲಿಯ ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಆಯೋಜಿಸಿದ್ದ ಜೇನು ಕೃಷಿ ತರಬೇತಿ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜೇನು ಹಲವು ವಿಧದಿಂದ ಉಪಕಾರಿಯಾಗಿದೆ. ಜೇನು ತುಪ್ಪ, ಜೇನು ಮೇಣ, ರಾಜಶಾಹಿರಸಗಳನ್ನು ನೇರವಾಗಿ ಮಾರಾಟ ಮಾಡಬಹುದು. ಪರಾಗ ಸ್ಪರ್ಶದಿಂದ ಬೆಳೆಗಳ ಅಧಿಕ ಇಳುವರಿ, ಜೈವಿಕ ಪರಿಸರ ನಿರ್ಮಾಣ ಮೊದಲಾದ ಪ್ರಯೋಜನಗಳು ಇವೆ ಎಂದು ತಿಳಿಸಿದರು.

ADVERTISEMENT

ಬೆಂಗಳೂರಿನ ಎಂ.ಸಿ.ಕೆ.ಎಸ್. ಫೌಂಡೇಷನ್‍ನ ಲೋಕೇಶ, ತರಬೇತುದಾರ ಸುರೇಶ ಉಪಸ್ಥಿತರಿದ್ದರು.

ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಮಹಾಲಿಂಗ, ನಾಗಶೆಟ್ಟಿ ಘೋಡಂಪಳ್ಳಿ ನಿರೂಪಿಸಿದರು. ಅನಿಲ್ ಪರೆಶನ್ನೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.