ಬೀದರ್/ ಜನವಾಡ: ಬೀದರ್ ತಾಲ್ಲೂಕಿನ ಚಿಟ್ಟಾ ಸಮೀಪ ಬುಧವಾರ ರಾತ್ರಿ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಾವಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಗ ಮೃತನಾದ ವಿಷಯ ತಿಳಿದು ಆಘಾತಕ್ಕೆ ಒಳಗಾಗಿದ್ದ ತಾಯಿ ಗುರುವಾರ ನಿಧನರಾಗಿದ್ದಾರೆ.
ಚಾಲಕ ಲಕ್ಷ್ಮಿಕಾಂತ ಶಂಕರರಾವ್ (45) ಹಾಗೂ ರವಿ ಮೋನಪ್ಪ (17) ಮೃತಪಟ್ಟವರು. ಲಕ್ಷ್ಮಿಕಾಂತ ಅವರ ತಾಯಿ ಶಾರದಾಬಾಯಿ ಜೋಶಿ (80) ಮೃತ ಮಹಿಳೆ. ಘಟನೆಯಲ್ಲಿ ಪ್ರಜ್ವಲ್, ಸಂಗಮೇಶ, ಪವನ್, ಅರ್ಜುನ ಹಾಗೂ ಮಾಣಿಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಾಳುಗಳೆಲ್ಲ ಘೋಡಂಪಳ್ಳಿ ಗ್ರಾಮದವರು. ಗಾಂಧಿ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.