ಹುಮನಾಬಾದ್: ‘ದೇಶದಲ್ಲಿ ರೈತರು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ’ ಎಂದು ಅಂಬಿಗರ ಚೌಡಯ್ಯ ಜಾಗೃತ ಆಶ್ರಮದ ರತ್ನಕಾಂತ ಶಿವಯೋಗಿ ಹೇಳಿದರು.
ತಾಲ್ಲೂಕಿನ ಲಾಲಧರಿ ಆಶ್ರಮದಲ್ಲಿ ಈಚೆಗೆ ಲಾಲಧರಿ ಶ್ರೀಗಳ ಪುಣ್ಯಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ರೈತರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ರೈತರಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಬಂದು ಅವರ ಸಂಕಷ್ಟ ಆಲಿಸಬೇಕು’ ಎಂದು ಒತ್ತಾಯಿಸಿದರು.
ಕೃಷಿ ಸಾಧಕರಾದ ಮಹಾದೇವರೆಡ್ಡಿ ಹಂದ್ರಾಳ(ಕೆ) ಅವರಿಗೆ ‘ಕೃಷಿ ಭೂಷಣ’ ಹಾಗೂ ರಮೇಶ ರೆಡ್ಡಿ ಇಸ್ಲಾಂಪುರ ಅವರಿಗೆ ‘ಕೃಷಿ ಸಮ್ಮಾನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಸದಲಾಪುರ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ, ಕಲ್ಲೂರ್ ಹಿರೇಮಠದ ಮೃತ್ಯುಂಜಯ ಶಿವಯೋಗಿ ಶಿವಾಚಾರ್ಯ, ವೇದಮೂರ್ತಿ ಅನಿಲ್ ಕುಮಾರ್ ಸ್ವಾಮಿ, ವೇದಮೂರ್ತಿ ಶಿವಕುಮಾರ ಸ್ವಾಮಿ, ಬಲಭೀಮ ಪಾಟೀಲ, ವೆಂಕಟರೆಡ್ಡಿ, ಸಂಜೀವರೆಡ್ಡಿ ಮೇಲಿನಮನಿ, ತಿಮ್ಮಣ್ಣ ಮುಸ್ತಾಪೂರ, ಬಸವರಾಜ ಪಾಟೀಲ, ಸಿದ್ರಾಮ ಚಿಕನಾಗಾಂವ, ಶಿವಕುಮಾರ ಬುಕ್ಕಾ, ನಾಗರಾಜ ಕುಲಕರ್ಣಿ, ಗಣೇಶ ಚೌಹಾಣ, ವಿಠಲ್ ಮಕೈ, ಸುಭಾಷ ಮೇತ್ರೆ, ರುಕ್ಕೊದ್ದೀನ್ ಇಸ್ಲಾಂಪೂರ, ಬಸವರಾಜ ಮಾತನಾಡಿದರು. ದಯಾಸಾಗಾರ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.