ADVERTISEMENT

ಸರ್ಕಾರ ಪೌರ ಸಿಬ್ಬಂದಿಗೆ ರಕ್ಷಣೆ ನೀಡಲಿ: ಚಿಟಗುಪ್ಪ ಪುರಸಭೆ ಮುಖ್ಯಾಧಿಕಾರಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 11:21 IST
Last Updated 24 ಡಿಸೆಂಬರ್ 2021, 11:21 IST
ಚಿಟಗುಪ್ಪ ಪಟ್ಟಣದ ಪುರಸಭೆ ಸಿಬ್ಬಂದಿ ಹೆಚ್ಚುವರಿ ತಹಶೀಲ್ದಾರ್ ರಾಜಶ್ರೀ ಅವರಿಗೆ ಮನವಿ ಸಲ್ಲಿಸಿದರು
ಚಿಟಗುಪ್ಪ ಪಟ್ಟಣದ ಪುರಸಭೆ ಸಿಬ್ಬಂದಿ ಹೆಚ್ಚುವರಿ ತಹಶೀಲ್ದಾರ್ ರಾಜಶ್ರೀ ಅವರಿಗೆ ಮನವಿ ಸಲ್ಲಿಸಿದರು   

ಚಿಟಗುಪ್ಪ: ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಎಚ್‌.ಮೆಕ್ಕಳಕಿ ಹಾಗೂ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಪುರಸಭೆ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಹೆಚ್ಚುವರಿ ತಹಶೀಲ್ದಾರ್ ರಾಜಶ್ರೀ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖ್ಯಾಧಿಕಾರಿ ಹುಸಾಮೋದ್ದೀನ್ ಮಾತನಾಡಿ,‘ಸರ್ಕಾರ ಪೌರ ಸಿಬ್ಬಂದಿಗೆ ರಕ್ಷಣೆ ನೀಡಬೇಕು. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿಗೆ ಕರ್ನಾಟಕ ಮಹಾನಗರ ಪಾಲಿಕೆ–1976 ರ ಪ್ರಕರಣ 489–492 ರಲ್ಲಿ ಪ್ರದತ್ತವಾಗಿರುವ ಭದ್ರತೆ ಒದಗಿಸುವಂತೆ ವಿಧಾನಸಭೆಗೆ ಶಿಫಾರಸು ಮಾಡಲಾಗಿದೆ. ಸರ್ಕಾರ ಅದಕ್ಕೆ ಮಂಜೂರಾತಿ ನೀಡಬೇಕು. ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಪುರಸಭೆ ಕಚೇರಿ ವ್ಯವಸ್ಥಾಪಕ ನರಸಿಂಹಲು, ಸಮುದಾಯ ಸಂಘಟಕ ಅಶೋಕ ಜಿ.ಚನ್ನಕೋಟೆ, ಸಂತೋಷ ಬಿರಾದಾರ, ಚಿದಾನಂದ, ರವಿಕುಮಾರ, ವೈಶಾಲಿ, ಕವಿತಾ, ಸರೋಜಿನಿ, ಶಿವಕುಮಾರ, ಮಲ್ಲಿಕಾರ್ಜುನ, ರಾಜಕುಮಾರ, ಸಂತೋಷ ಕುಮಾರ್‌, ಪರಶುರಾಮ, ಜಗನ್ನಾಥ, ನಾಗೇಂದ್ರ ಲಕ್ಷ್ಮಣ, ರವಿ ಶಾಖಾ, ರವಿ ಭಯ್ಯ, ಶೈಲೇಶ್‌, ರಾಜೇಶ್‌ ತೆಲಂಗ್‌, ದಿಲೀಪ, ಮಲ್ಲಮ್ಮ, ಧನರಾಜ ಹಾಗೂ ಬಕ್ಕಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.