ADVERTISEMENT

ಬೀದರ್: ವಚನ ಗ್ರಂಥದ ಅದ್ಧೂರಿ ಮೆರವಣಿಗೆ 

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 8:58 IST
Last Updated 9 ಫೆಬ್ರುವರಿ 2020, 8:58 IST
ವಚನ ಸಾಹಿತ್ಯದ ಅದ್ಧೂರಿ ಮೆರವಣಿಗೆ
ವಚನ ಸಾಹಿತ್ಯದ ಅದ್ಧೂರಿ ಮೆರವಣಿಗೆ   

ಬೀದರ್: ಲಿಂಗಾಯತ ಮಹಾಮಠ ಹಾಗೂ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ‘ವಚನ ವಿಜಯೋತ್ಸವ’ ಅರ್ಥಪೂರ್ಣವಾಗಿ ನಡೆದ ಪ್ರಯುಕ್ತ ಭಾನುವಾರ ನಗರದಲ್ಲಿ ವಚನ ಸಾಹಿತ್ಯದ ಅದ್ಧೂರಿ ಮೆರವಣಿಗೆ ಆರಂಭವಾಗಿದೆ.

ಸೊಲ್ಲಾಪುರದ ನಂದಿಕೋಲು, ಬಸಾಪುರದ ಬಸವ ಸೇನಾ ಝಾಂಜ್ ಮೇಳ, ದಾಣಗೆರೆಯ ಭಜನಾ ಮೇಳ, ಮಂಡ್ಯದ ಪೂಜಾ ಕುಣಿತ–ತಮಟೆ ತಂಡ, ಬೆಳ್ಳೆರಿಯ ಮಹಿಳಾ ಡೊಳ್ಳು, ಬರೂರಿನ ಚಿಟಕಿ ಭಜನೆ–ಹಲಗೆ ತಂಡ, ಗದಗಿನ ಜಾನಪದ ಕಲಾ ತಂಡ ಮೆರವಣಿಗೆಯಲ್ಲಿ ಕಲಾ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ

ಬೀದರ್‌ನ ಕೋಲಾಟ, ವಿದ್ಯಾರ್ಥಿನಿಯರ ಲೇಜಿಮ್‌, ಭಜನಾ ತಂಡಗಳು ವಚನ ಗಾಯನದ ಮೂಲಕ ಭಕ್ತಿಭಾವ ಮೆರೆದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಬಸವ ಜ್ಯೋತಿ ತಂಡಗಳು, ತಲೆಯ ಮೇಲೆ ವಚನ ಸಾಹಿತ್ಯ ಹೊತ್ತ ಒಂದು ಸಾವಿರ ಮಹಿಳೆಯರು ಕಳೆಕಟ್ಟಿದ್ದಾರೆ.

ADVERTISEMENT

ಸಂಗೀತ ನಾದ ನಿನಾದಕ್ಕೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.