ಬಸವಕಲ್ಯಾಣ: ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆಯಲ್ಲಿ ಶನಿವಾರ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ರಾಜಕೀಯ ಮುಖಂಡರ ಜತೆ ಮಠಾಧೀಶರು, ವಿವಿಧ ಜಾತಿ, ಧರ್ಮದವರು ಹಾಗೂ ವಾದ್ಯ ಮೇಳ, ಕಲಾ ತಂಡಗಳು ಪಾಲ್ಗೊಂಡಿದ್ದರಿಂದ ವೈಶಿಷ್ಟ್ಯಪೂರ್ಣವೆನಿಸಿತು.
ಕೋಟೆಯಿಂದ ಮುಖ್ಯ ರಸ್ತೆಯ ಮೂಲಕ ಶಿವಾಜಿ ಪಾರ್ಕ್‌ವರೆಗೆ ಯಾತ್ರೆ ನಡೆಯಿತು. ವಿದ್ಯಾರ್ಥಿಗಳು ಉದ್ದದ ತಿರಂಗಾ ಹಿಡಿದು ಸಾಗಿದರು. ಪಾಲ್ಗೊಂಡವರೆಲ್ಲರೂ ಧ್ವಜ ಹಿಡಿದಿದ್ದರು. ಸಾರೋಟಿನಲ್ಲಿ ಭಾರತ ಮಾತೆಯ ಭಾವಚಿತ್ರ ಇಡಲಾಗಿತ್ತು. ಪ್ರತ್ಯೇಕ ವಾಹನಗಳ ಮೇಲೆ ಶ್ರೀರಾಮನ ಚಿತ್ರ, ಮಹಾರಾಣಿ ಅಹಿಲ್ಯಾಬಾಯಿ ಹೊಳ್ಕರ್ ಭಾವಚಿತ್ರ ಮತ್ತು ಪ್ರಧಾನಿ, ಗೃಹಸಚಿವ, ಸೈನ್ಯದ ಮೂರು ವಿಭಾಗಗಳ ಪ್ರಮುಖರ ಹಾಗೂ ಆಪರೇಷನ್ ಸಿಂಧೂರದ ಇಬ್ಬರು ಮಹಿಳಾ ಕರ್ನಲ್‌ಗಳ ಭಾವಚಿತ್ರಗಳನ್ನು ಕೊಂಡೊಯ್ಯಲಾಯಿತು.
ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಎನ್.ಸಿ.ಸಿ ಕೆಡೆಟ್‌ಗಳು, ಲಂಬಾಣಿ ನೃತ್ಯದವರ ಪಾಲ್ಗೊಂಡಿದ್ದರು. ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಧ್ವನಿವರ್ಧಕದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು.
ಶಾಸಕ ಶರಣು ಸಲಗರ ಮತ್ತು ಪತ್ನಿ ಸಾವಿತ್ರಿ ಸಲಗರ ಹಾಗೂ ಮುಖಂಡರು, ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಹರ್ಷದಿಂದ ಕುಣಿದರು.
ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ಹಾರಕೂಡ ಚನ್ನವೀರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮುಚಳಂಬ ಪ್ರಣವಾನಂದ ಸ್ವಾಮೀಜಿ, ಬಸವ ಮಹಾಮನೆ ಸಿದ್ದರಾಮೇಶ್ವರ ಸ್ವಾಮೀಜಿ, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಬಾಗಸವಾರ ದರ್ಗಾದ ಜಿಯಾಪಾಶಾ ಜಾಗೀರದಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ತಾಲ್ಲೂಕು ಅಧ್ಯಕ್ಷ ಜ್ಞಾನೇಶ್ವರ ಮುಳೆ, ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ ಮತ್ತಿತರರು ಪಾಲ್ಗೊಂಡಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.