
ಪ್ರಜಾವಾಣಿ ವಾರ್ತೆ
ಬೀದರ್: ನಗರದ ಪಂಡಿತ ದೀನ ದಯಾಳ ನಗರದಲ್ಲಿ ನವೀಕರಣಗೊಂಡ ಹನುಮಾನ ಮಂದಿರದ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.
ಜಿ.ಎನ್. ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದೇವಸ್ಥಾನದ ನಿರ್ಮಾಣಕ್ಕೆ ಜಿ.ಎನ್. ಫೌಂಡೇಶನ್ ವತಿಯಿಂದ ₹3.51 ಲಕ್ಷ ದೇಣಿಗೆ ನೀಡಿದ್ದೆ. ಮಂದಿರ ನಿರ್ಮಾಣದಿಂದ ಭಕ್ತರ ಆಸೆ ಈಡೇರಿದಂತಾಗಿದೆ ಎಂದು ಹೇಳಿದರು.
ಕಲ್ಯಾಣರಾವ್ ಬಿರಾದಾರ ಅವರು ಮೂರ್ತಿ ಸ್ಥಾಪನೆಗೆ ₹51,000 ದೇಣಿಗೆ ನೀಡಿದರು. ಡಾ. ರಜನೀಶ್ ವಾಲಿ, ಸಂದೀಪ ಪಾಟೀಲ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.