ADVERTISEMENT

ಖಟಕಚಿಂಚೋಳಿ: ಮಕ್ಕಳ ಉಚಿತ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 12:46 IST
Last Updated 15 ನವೆಂಬರ್ 2022, 12:46 IST
ಖಟಕಚಿಂಚೋಳಿಯ ಬಸವೇಶ್ವರರ ವೃತ್ತದ ಬಳಿ ಮಕ್ಕಳ ತಜ್ಞ ಡಾ.ದಿನಕರ್ ಮೊರೆ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು
ಖಟಕಚಿಂಚೋಳಿಯ ಬಸವೇಶ್ವರರ ವೃತ್ತದ ಬಳಿ ಮಕ್ಕಳ ತಜ್ಞ ಡಾ.ದಿನಕರ್ ಮೊರೆ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು   

ಖಟಕಚಿಂಚೋಳಿ: ಇಲ್ಲಿಯ ಬಸವೇಶ್ವರ ವೃತ್ತದ ಬಳಿ ಮಂಗಳವಾರ ಕಲಬುರಗಿಯ ಮಕ್ಕಳ ತಜ್ಞ ಡಾ.ದಿನಕರ ಮೊರೆ ಮಕ್ಕಳ ಉಚಿತ ಆರೋಗ್ಯ ತಪಾಸಣೆ ನಡೆಸಿದರು.

ಡಾ.ದಿನಕರ ಮೊರೆ ಮಾತನಾಡಿ,‘ನಾನು ಸುಮಾರು 40 ವರ್ಷಗಳಿಂದ ಕಲಬುರಗಿಯಲ್ಲಿ ವಾಸಿಸುತ್ತಿದ್ದೇನೆ. ಮಕ್ಕಳ ವೈದ್ಯನಾದ ನಾನು ನನ್ನ ತಾಲ್ಲೂಕಿನ ಜನರಿಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಈ ಶಿಬಿರ ನಡೆಸುತ್ತಿದ್ದೇನೆ’ ಎಂದರು.

ನವೆಂಬರ್ 9ರಿಂದ 16ರವರೆಗೆ ಪ್ರತಿಯೊಂದು ಹೋಬಳಿಯಲ್ಲಿ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ADVERTISEMENT

ವೈದ್ಯರು ಕಣ್ಣಿಗೆ ಕಾಣುವ ದೇವರು ಎನ್ನುವ ನಂಬಿಕೆಯಿದೆ. ಅದನ್ನು ಡಾ ದಿನಕರ್ ಮೊರೆ ಅವರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಚಳಕಾಪುರವಾಡಿ ಗ್ರಾಮದ ಅನಿಲ ಜಾಧವ ತಿಳಿಸಿದರು.

ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಮಕ್ಕಳನ್ನು ಕರೆದುಕೊಂಡು ಬಂದು ಆರೋಗ್ಯ ತಪಾಸಣೆ ಮಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.