ADVERTISEMENT

ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:42 IST
Last Updated 20 ಅಕ್ಟೋಬರ್ 2020, 15:42 IST
ಬೀದರ್‌ನಲ್ಲಿ ನಡೆದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ 9ನೇ ರ್‍ಯಾಂಕ್ ಗಳಿಸಿದ ಕಾರ್ತಿಕ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ನಡೆದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ 9ನೇ ರ್‍ಯಾಂಕ್ ಗಳಿಸಿದ ಕಾರ್ತಿಕ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು   

ಬೀದರ್: ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ 8ನೇ ವಾರ್ಷಿಕ ಮಹಾಸಭೆ ಇಲ್ಲಿಯ ಶಿವನಗರದಲ್ಲಿ ಇರುವ ಸಹಕಾರಿಯ ಕಚೇರಿಯಲ್ಲಿ ನಡೆಯಿತು.

ಸಹಕಾರಿಯು ಎಂಟು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆದಿದೆ. ಸದಸ್ಯರ ಹಿತ ಕಾಪಾಡಲು ಶ್ರಮಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷ ಸಂಗ್ರಾಮ ರೆಡ್ಡಿ ಹುಣಸಗೇರಿ ತಿಳಿಸಿದರು.

ಹೃದಯ ರೋಗ ತಜ್ಞ ಡಾ. ಶ್ರೀಕಾಂತ ರೆಡ್ಡಿ ಉದ್ಘಾಟಿಸಿದರು. ಶ್ರೀನಿವಾಸ ರೆಡ್ಡಿ ತಿರುಪತಿ ರೆಡ್ಡಿ ಮುದ್ನಾಳ ವಾರ್ಷಿಕ ವರದಿ ವಾಚಿಸಿದರು.

ADVERTISEMENT

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ 9ನೇ ರ್‍ಯಾಂಕ್ ಗಳಿಸಿದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ರೆಡ್ಡಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ, ಕಾರ್ಯದರ್ಶಿ ಗೋಪಾಲ ರೆಡ್ಡಿ, ರಾಜರೆಡ್ಡಿ ಶೇರಿಕಾರ, ಕೃಷ್ಣರೆಡ್ಡಿ ಎನ್., ಶರಣಪ್ಪ ರೆಡ್ಡಿ ತಿರ್ಲಾಪುರ, ವೆಂಕಟ ರೆಡ್ಡಿ, ವೀರಂತ ರೆಡ್ಡಿ ಬಸವಕಲ್ಯಾಣ, ಮಲ್ಲಿಕಾರ್ಜುನ ತಿರ್ಲಾಪುರ, ಬಕ್ಕಪ್ಪ ಬಸರೆಡ್ಡಿ, ಮಲ್ಲಪ್ಪ ಓತಗಿ ಇದ್ದರು.

ಗೋವಿಂದ ರೆಡ್ಡಿ ಸ್ವಾಗತಿಸಿದರು. ಶ್ರೀನಿವಾಸ ರೆಡ್ಡಿ ಗುಮ್ಮೆ ನಿರೂಪಿಸಿದರು. ಮೈಪಾಲರೆಡ್ಡಿ ಶೇರಿಕಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.