ADVERTISEMENT

ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಉದ್ಘಾಟನೆ

ಶಿಕ್ಷಕ ವೃತ್ತಿ ಪವಿತ್ರ: ಶಾಸಕ ರಹೀಂಖಾನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 13:41 IST
Last Updated 7 ಫೆಬ್ರುವರಿ 2023, 13:41 IST
ಬೀದರ್‌ನ ಜೀಜಾಮಾತಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಬೀದರ್‌ನ ಜೀಜಾಮಾತಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು   

ಬೀದರ್: ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕವನ್ನು ಇಲ್ಲಿಯ ಮೈಲೂರು ರಸ್ತೆಯಲ್ಲಿ ಇರುವ ಜೀಜಾಮಾತಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ರಹೀಂಖಾನ್ ಉದ್ಘಾಟಿಸಿದರು.

ಶಿಕ್ಷಕ ಹುದ್ದೆ ಬಹಳ ಪವಿತ್ರವಾದದ್ದು. ಶಿಕ್ಷಕರು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಮಹಾಮನೆ ಟ್ರಸ್ಟ್ ಅಧ್ಯಕ್ಷ ಬೆಲ್ದಾಳ ಸಿದ್ಧರಾಮ ಶರಣರು ಮಾತನಾಡಿ, ಶಿಕ್ಷಣವೇ ಅಭಿವೃದ್ಧಿಯ ಬೇರು. ಸದೃಢ ಹಾಗೂ ಸುಂದರ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಮಾತನಾಡಿದರು. ಸಂಘದ ನೂತನ ಪದಾಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ADVERTISEMENT

ಕಸಾಪ ಬೀದರ್ ಉತ್ತರ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ, ಶಿಕ್ಷಕರ ವಿವಿಧ ಸಂಘಟನೆಗಳ ಪ್ರಮುಖರಾದ ಶಿವರಾಜ ಕಪಲಾಪುರೆ, ವಿಜಯಕುಮಾರ ಪಾಟೀಲ, ವಿಷ್ಣುಕಾಂತ ಠಾಕೂರ್, ವೈಜಿನಾಥ ಸಾಗರ್, ಸುರೇಶ ಟಾಳೆ, ಸಂಗಶೆಟ್ಟಿ ಹಲಬರ್ಗೆ, ಗೋವಿಂದ ಪೂಜಾರಿ ಇದ್ದರು.

ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು

ದೇವಿಪ್ರಸಾದ್ ಕಲಾಲ್ (ಗೌರವಾಧ್ಯಕ್ಷ), ಪಾಂಡುರಂಗ ಬೆಲ್ದಾರ್ (ಅಧ್ಯಕ್ಷ), ರವಿಕುಮಾರ ಕುಮನೂರ, ಲಕ್ಷ್ಮಣ ಪೂಜಾರಿ, ದಶರಥ ಕಪ್ಪೇಕರ್, ಪರಮೇಶ್ವರ ಬಿರಾದಾರ (ಉಪಾಧ್ಯಕ್ಷರು), ವೀರಭದ್ರಪ್ಪ ಚಟ್ನಳ್ಳಿ (ಪ್ರಧಾನ ಕಾರ್ಯದರ್ಶಿ), ಬಲವಂತ ರಾಠೋಡ್, ಚಾಮುಂಡೇಶ್ವರಿ, ಜಗದೇವಿ ಭೋಸ್ಲೆ (ಕಾರ್ಯದರ್ಶಿ), ಪಾಂಡುರಂಗ ಮೈತ್ರಿ, ವೈಜಿನಾಥ ಸಾಳೆ, ಸುವರ್ಣ ವಾಘಮಾರೆ (ಸಂಘಟನಾ ಕಾರ್ಯದರ್ಶಿ), ಕನ್ಯಾಕುಮಾರಿ (ಸಾಂಸ್ಕೃತಿಕ ಕಾರ್ಯದರ್ಶಿ), ಸಂಜೀವಕುಮಾರ ಕನೇರಿ, ಆರತಿ (ಕ್ರೀಡಾ ಕಾರ್ಯದರ್ಶಿ), ಅಬ್ದುಲ್ ಅಲಸ್, ಬಾಬುರಾವ್ ಮಾಳಗೆ (ಪ್ರಚಾರ ಕಾರ್ಯದರ್ಶಿ), ಸಂಜೀವಕುಮಾರ ಸ್ವಾಮಿ (ಕೋಶಾಧ್ಯಕ್ಷ), ಶಾಂತಕುಮಾರ ಹುಮನಾಬಾದ್ (ಲೆಕ್ಕ ಪರಿಶೋಧಕ), ಶಶಿಧರ, ನಿಜಾಂಪುರ, ನಂದಕುಮಾರ ಚಂದ್ರಕಾಂತ ಚಿಕ್ಲೆ, ಸುಭಾಷ್ ಚೌಹಾಣ್, ಉಮೇಶ ಪಾಟೀಲ, ಪ್ರಹ್ಲಾದ್, ಶಕೀಲ್ ಜಾಫರಿ (ನಾಮ ನಿರ್ದೇಶಿತ ಸದಸ್ಯರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.