ADVERTISEMENT

ಜ್ಞಾನಸುಧಾ ಪ್ರವಾಸೋದ್ಯಮ ಕ್ಲಬ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 15:01 IST
Last Updated 7 ಡಿಸೆಂಬರ್ 2022, 15:01 IST
ಬೀದರ್‌ನ ಜ್ಞಾನಸುಧಾ ವಿದ್ಯಾಲಯದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಅವರು ಜ್ಞಾನಸುಧಾ ಪ್ರವಾಸೋದ್ಯಮ ಕ್ಲಬ್ ಉದ್ಘಾಟಿಸಿದರು
ಬೀದರ್‌ನ ಜ್ಞಾನಸುಧಾ ವಿದ್ಯಾಲಯದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಅವರು ಜ್ಞಾನಸುಧಾ ಪ್ರವಾಸೋದ್ಯಮ ಕ್ಲಬ್ ಉದ್ಘಾಟಿಸಿದರು   

ಬೀದರ್: ಇಲ್ಲಿಯ ಮಾಮನಕೇರಿ ಸಮೀಪದ ಜ್ಞಾನಸುಧಾ ವಿದ್ಯಾಲಯದಲ್ಲಿ ಜ್ಞಾನಸುಧಾ ಪ್ರವಾಸೋದ್ಯಮ ಕ್ಲಬ್ ಅನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಉದ್ಘಾಟಿಸಿದರು.

ಯುವ ಪೀಳಿಗೆಯನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶದಿಂದ ಪ್ರತಿ ಶಾಲೆಯಲ್ಲಿ ಯುವ ಪ್ರವಾಸೋದ್ಯಮ ಕ್ಲಬ್ ಆರಂಭಿಸಲು ಪ್ರಧಾನಿ ಕರೆ ನೀಡಿದ್ದರು. ಜ್ಞಾನಸುಧಾ ವಿದ್ಯಾಲಯ ಕ್ಲಬ್ ಆರಂಭಿಸಿದ ರಾಜ್ಯದ ಮೊದಲ ಶಾಲೆಯಾಗಿದೆ ಎಂದು ಅವರು ಹೇಳಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪ್ರೊ. ಪೂರ್ಣಿಮಾ.ಜಿ, ನಿರ್ದೇಶಕ ಮುನೇಶ್ವರ ಲಾಖಾ ಮಾತನಾಡಿದರು.

ADVERTISEMENT

ಕ್ಲಬ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಚನ್ನವೀರ ಪಾಟೀಲ, ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯೆ ಸುನಿತಾ ಸ್ವಾಮಿ, ಉಪ ಪ್ರಾಚಾರ್ಯೆ ಕಲ್ಪನಾ, ಮೇಲ್ವಿಚಾರಕರಾದ ರಂಜನಿ, ಸಾಯಿಗೀತಾ ಹಾಗೂ ವಸಿಮಾ ಇದ್ದರು. ಸ್ಪಂದನಾ ನಿರೂಪಿಸಿದರು.

ಶೀಜಲ್ ಸ್ವಾಗತಿಸಿದರು. ಶ್ರೇಯಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.