ADVERTISEMENT

ನೂತನ ಶಟಲ್ ಕೋರ್ಟ್ ಉದ್ಘಾಟನೆ

ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 12:28 IST
Last Updated 3 ನವೆಂಬರ್ 2021, 12:28 IST
ಬೀದರ್‌ನ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಿರ್ಮಿಸಿರುವ ನೂತನ ಶಟಲ್ ಕೋರ್ಟ್‍ನ್ನು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕ ರವಿ ಅಕಾರಿ ಉದ್ಘಾಟಿಸಿದರು, ರಾಜೇಂದ್ರಕುಮಾರ ಗಂದಗೆ, ಬಸವರಾಜ ಜಕ್ಕಾ ಇದ್ದಾರೆ
ಬೀದರ್‌ನ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಿರ್ಮಿಸಿರುವ ನೂತನ ಶಟಲ್ ಕೋರ್ಟ್‍ನ್ನು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕ ರವಿ ಅಕಾರಿ ಉದ್ಘಾಟಿಸಿದರು, ರಾಜೇಂದ್ರಕುಮಾರ ಗಂದಗೆ, ಬಸವರಾಜ ಜಕ್ಕಾ ಇದ್ದಾರೆ   

ಬೀದರ್: ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಿರ್ಮಿಸಿರುವ ನೂತನ ಶಟಲ್ ಕೋರ್ಟ್‍ನ್ನು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕ ರವಿ ಅಕಾರಿ ಉದ್ಘಾಟಿಸಿದರು.

ಕ್ರೀಡೆಗೆ ಉತ್ತೇಜನ ನೀಡುವ ದಿಸೆಯಲ್ಲಿ ನೌಕರರ ಭವನದಲ್ಲಿ ಶಟಲ್ ಕೋರ್ಟ್ ನಿರ್ಮಿಸಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

ಮಾನಸಿಕ ಒತ್ತಡದಿಂದ ಹೊರ ಬರಲು ಸರ್ಕಾರಿ ನೌಕರರು ಬಿಡುವಿನ ವೇಳೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ADVERTISEMENT

ಈಗಾಗಲೇ ನೌಕರರ ಭವನ ನವೀಕರಣಗೊಂಡಿದೆ. ಆವರಣದಲ್ಲಿ ಸುಂದರ ಶಟಲ್ ಕೋರ್ಟ್ ನಿರ್ಮಿಸಿದ್ದಕ್ಕೆ ನೌಕರರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ನೌಕರರು ಬೆಳಿಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಶಟಲ್ ಆಡಲು ನೆರವಾಗಲಿದೆ. ಬರುವ ದಿನಗಳಲ್ಲಿ ನೌಕರರಿಗೆ ವಿವಿಧ ಕ್ರೀಡಾ ತರಬೇತಿಗಳನ್ನು ನೀಡಲು ಯೋಜಿಸಲಾಗಿದೆ ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ನಗರಸಭೆ ಸದಸ್ಯ ಸಂಗಮೇಶ, ಲಾಹೋಟಿ ಮಾರುತಿ ಶೋರೂಂ ವ್ಯವಸ್ಥಾಪಕ ಜಗನ್ನಾಥ ರೆಡ್ಡಿ, ರಾಜೇಂದ್ರ ಜೊನ್ನಿಕೇರಿ, ಹಣಮಂತರಾವ್ ಮೈಲಾರೆ, ಗುರುನಾಥ ಪಾಂಚಾಳ, ಪ್ರಭುಲಿಂಗ ತೂಗಾವೆ, ಸುನಿಲ್, ಗಣಪತಿ ಜಮಾದಾರ್, ಮನೋಹರ ಕಾಶಿ, ಮಲ್ಲಿಕಾರ್ಜುನ ಪಂಚಾಕ್ಷರಿ, ಓಂಪ್ರಕಾಶ ದಡ್ಡೆ, ಸಂಜೀವ ಸೂರ್ಯವಂಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.