ಔರಾದ್: ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮದ ಸ್ವಸಹಾಯ ಸಂಘದ ಮಹಿಳೆ ಸುಜಾತಾ ಪಾಟೀಲ ಸ್ಥಾಪಿಸಿದ ನ್ಯಾಚುರಲ್ ಚಕ್ಕಿ ತಯಾರಿಕಾ ಘಟಕವನ್ನು ಗುರುವಾರ ಭಾಲ್ಕಿ ಮಠದ ಮಹಾಲಿಂಗ ದೇವರು ಉದ್ಘಾಟಿಸದರು.
ಸುಜಾತಾ ಪಾಟೀಲ ಮಾತನಾಡಿ,‘ ನಾನು ಆರಂಭರದಲ್ಲಿ ನಿತ್ಯ 1 ಕೆಜಿ ಪ್ಯಾಕೆಟ್ ಚಕ್ಕಿ ತಯಾರಿಸಿ ಮಾರಾಟ ಮಾಡುತ್ತಿದ್ದೆ. ಸರ್ಕಾರಿ ಸಭೆ ಸಮಾರಂಭ, ಉತ್ಸವ, ಸಮ್ಮೇಳನಗಳಲ್ಲಿ ನಮ್ಮ ಚಕ್ಕಿಗೆ ಭಾರೀ ಬೇಡಿಕೆ ಬಂತು. ಸರ್ಕಾರಿ ಶಾಲೆ ಮಕ್ಕಳಿಗೂ ಚಿಕ್ಕಿ ಪೂರೈಸಲು ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ಬ್ಯಾಂಕ್ ಸಾಲ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್‌ಎಲ್ಎಂ) ನೆರವಿನಿಂದ ₹10 ಲಕ್ಷ ಹೂಡಿಕೆ ಮಾಡಿ ಘಟಕ ಆರಂಭಿಸಲಾಗಿದೆ. ಈಗ ನಿತ್ಯ 100 ಪ್ಯಾಕೆಟ್ (ಒಂದು ಪ್ಯಾಕೆಟ್‌ನಲ್ಲಿ 1 ಕೆಜಿ) ಉತ್ಪಾದಿಸುವ ತಯಾರಿ ಮಾಡಿಕೊಳ್ಳಲಾಗಿದೆ’ ಎಂದರು.
ಜಿಲ್ಲಾ ಕೈಗಾರಿಕೆ ಇಲಾಖೆ ನಿರ್ದೇಶಕ ರಾಜಕುಮಾರ ಪಾಟೀಲ,ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರ ಹಾಗೂ ಬ್ಯಾಂಕ್ ನೆರವು ನೀಡುತ್ತದೆ. ಬೇರೆಯವರು ಕೂಡ ಈ ರೀತಿಯ ಸ್ವ ಉದ್ಯೋಗ ಮಾಡಬೇಕು’ ಎಂದರು.
ಸಂತಪುರ ಎಸ್‌ಬಿಐ ವ್ಯವಸ್ಥಾಪಕ ಸುರೇಶಕುಮಾರ, ಮುಖಂಡ ರಾಮಶೆಟ್ಟಿ ಪನ್ನಾಳೆ, ಎನ್ಆರ್‌ಎಲ್ಎಂ ನಿರ್ವಾಹಕ ಪ್ರವೀಣ ಸ್ವಾಮಿ, ಶರಣಬಸಪ್ಪ ಸಾವಳೆ, ರಾಜಕುಮಾರ ಗೋರಟೆ, ಸುಲೋಚನಾ ಜಾಧವ್, ಶಿವಾನಂದ, ನಾಗಭೂಷಣ ಪಾಟೀಲ ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.