ADVERTISEMENT

ಪರುಷಕಟ್ಟೆ ಅಭಿವೃದ್ಧಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 5:38 IST
Last Updated 17 ಫೆಬ್ರುವರಿ 2022, 5:38 IST
ಬಸವಕಲ್ಯಾಣದ ಬಸವಣ್ಣನವರ ಪರುಷಕಟ್ಟೆ ಕಾಮಗಾರಿಗೆ ಬುಧವಾರ ಶಾಸಕ ಶರಣು ಸಲಗರ ಚಾಲನೆ ನೀಡಿ ಮಾತನಾಡಿದರು. ತಹಶೀಲ್ದಾರ್ ಸಾವಿತ್ರಿ ಸಲಗರ ಇದ್ದರು
ಬಸವಕಲ್ಯಾಣದ ಬಸವಣ್ಣನವರ ಪರುಷಕಟ್ಟೆ ಕಾಮಗಾರಿಗೆ ಬುಧವಾರ ಶಾಸಕ ಶರಣು ಸಲಗರ ಚಾಲನೆ ನೀಡಿ ಮಾತನಾಡಿದರು. ತಹಶೀಲ್ದಾರ್ ಸಾವಿತ್ರಿ ಸಲಗರ ಇದ್ದರು   

ಬಸವಕಲ್ಯಾಣ: ಇಲ್ಲಿನ ಐತಿಹಾಸಿಕ ಸ್ಮಾರಕ ಬಸವಣ್ಣನವರ ಪರುಷಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಾಸಕ ಶರಣು ಸಲಗರ ಅವರು ಚಾಲನೆ ನೀಡಿದರು.

ಭೂಮಿಪೂಝೆ ನೆರವೇರಿಸಿ ಮಾತನಾಡಿದ ಅವರು, ‘₹1.18 ಕೋಟಿ ವೆಚ್ಚದಲ್ಲಿ ಪರುಷಕಟ್ಟೆಯ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಅನುದಾನ ಮಂಜೂರು ಮಾಡಿಸಲಾಗುವುದು’ ಎಂದರು.

‘ಪರುಷಕಟ್ಟೆಯು ಬಸವಣ್ಣನವರ ಮಹತ್ವದ ಸ್ಥಳವಾಗಿದೆ. ಬಿಜ್ಜಳನ ಆಸ್ಥಾನದ ಮಹಾಮಂತ್ರಿ ಆಗಿದ್ದಾಗ ಪರುಷಕಟ್ಟೆಯ ಮೇಲೆ ಕುಳಿತು ನ್ಯಾಯ ಪಂಚಾಯಿತಿ ಮಾಡುತ್ತಿದ್ದರು. ಅನೇಕ ವರ್ಷಗಳಿಂದ ಇಂಥ ಮಹತ್ವದ ಸ್ಥಳದ ಅಭಿವೃದ್ಧಿ ಆಗಿರಲಿಲ್ಲ. ನೂತನ ಅನುಭವ ಮಂಟಪದ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಶಿವಾಜಿ ಪಾರ್ಕ್, ಗೋರಟಾ ಸರ್ದಾರ ವಲ್ಲಭಭಾಯಿ ಪಟೇಲ್ ಸ್ಮಾರಕ ಸೇರಿದಂತೆ ಇತರೆ ಕಾರ್ಯಗಳಿಗೂ ವೇಗ ದೊರೆತಿದೆ’ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್ ಸಾವಿತ್ರಿ ಸಲಗರ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಅಶೋಕ ನಾಗರಾಳೆ, ನಗರಸಭೆ ಸದಸ್ಯರಾದ ದೀಪಕ ಗಾಯಕವಾಡ, ಸಿದ್ದು ಬಿರಾದಾರ, ರಾಮಚಂದ್ರ ಹುಡಗೆ, ರಾಜಕುಮಾರ ಶಿರಗಾಪುರ, ಸುಭಾಷ ಹೊಳಕುಂದೆ, ಬಸವರಾಜ ಬಾಲಿಕಿಲೆ, ಪ್ರಕಾಶ ಮೆಂಡೋಳೆ, ಕಾಶಪ್ಪ ಸಕ್ಕರಬಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.