ADVERTISEMENT

ಹೆಳವ ಸಮುದಾಯದ ಸುನಿಲ ಕುಟುಂಬಕ್ಕೆ ಪ್ರದೀಪ ವಾತಡೆಯಿಂದ ₹10 ಲಕ್ಷ ವಿಮೆ ನೆರವು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 13:30 IST
Last Updated 13 ಸೆಪ್ಟೆಂಬರ್ 2022, 13:30 IST
ಬಸವಕಲ್ಯಾಣದ ಕೈಕಾಡಿ ಓಣಿಯಲ್ಲಿನ ಹೆಳವ ಸಮಾಜದ ದಿ.ಸುನಿಲ ಅವರ ಕುಟುಂಬದವರಿಗೆ ಪ್ರದೀಪ ವಾತಡೆ ಜೀವವಿಮೆಯ ದಾಖಲೆ ನೀಡಿದರು
ಬಸವಕಲ್ಯಾಣದ ಕೈಕಾಡಿ ಓಣಿಯಲ್ಲಿನ ಹೆಳವ ಸಮಾಜದ ದಿ.ಸುನಿಲ ಅವರ ಕುಟುಂಬದವರಿಗೆ ಪ್ರದೀಪ ವಾತಡೆ ಜೀವವಿಮೆಯ ದಾಖಲೆ ನೀಡಿದರು   

ಬಸವಕಲ್ಯಾಣ: ಕೆಲಸ ಅರಿಸಿ ದುಬೈಗೆ ಹೋಗಿ ಅಲ್ಲಿಯೇ ಸಾವನ್ನಪ್ಪಿದ್ದ ನಗರದ ಕೈಕಾಡಿ ಓಣಿಯ ಹೆಳವ ಸಮುದಾಯದ ಸುನಿಲ ಅವರ ಕುಟುಂಬಕ್ಕೆ ಮುಖಂಡ ಪ್ರದೀಪ ವಾತಡೆಯವರು ₹10 ಲಕ್ಷದ ವಿಮೆಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಸುನಿಲ ದುಬೈನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಕೆಲ ತಾಂತ್ರಿಕ ಕಾರಣಗಳಿಂದಾಗಿ ಅವರ ಮೃತದೇಹ ತರಲು ವಿಳಂಬವಾಗಿತ್ತು. ಈ ಕಾರ್ಯದಲ್ಲಿಯೂ ಪ್ರದೀಪ ವಾತಡೆಯವರು ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಮತ್ತಿತರರ ಸಹಾಯ ಪಡೆದು ನೆರವಾದರು.

ಸ್ವಂತ ಹಣದಿಂದ ವಿಮಾ ಕಂತುಗಳನ್ನು ತುಂಬಿ ಸುನಿಲ ಅವರ ತಾಯಿ ಮತ್ತು ಪತ್ನಿ ಹೆಸರಲ್ಲಿ ತಲಾ ₹5 ಲಕ್ಷದ ವಿಮೆ ಮಾಡಿಸಿದ್ದಾರೆ. ವಿಮೆಯ ದಾಖಲೆಗಳನ್ನು ಸೋಮವಾರ ಅವರ ಕುಟುಂಬದವರಿಗೆ ನೀಡಲಾಯಿತು.

ADVERTISEMENT

ಪ್ರಮುಖರಾದ ಡಾ.ವೈಜನಾಥ ಭಂಡಾರಿ, ಭೀಮಣ್ಣ ಹೊರದೊಡ್ಡೆ, ಮಹೇಶ ಪಾಟೀಲ, ಪ್ರಭು ಕಾಡಾದಿ, ಸಂಗಮೇಶ ಬೆಲ್ಲೆ, ನೀಲಕಂಠ ತೂಗಾವೆ. ಸುರೇಶ ಜಮ್ಮು, ಆನಂದ ಜೀವಣೆ, ಸಂದೀಪ ಸಾಂಡೆ ಹಾಗೂ ಅಭಿ ವಾತಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.