ADVERTISEMENT

‘ಶರಣ ಸಂಸ್ಕೃತಿ ಮೈಗೂಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 14:07 IST
Last Updated 9 ಡಿಸೆಂಬರ್ 2019, 14:07 IST

ಕಮಲನಗರ: ವ್ಯಕ್ತಿತ್ವ ನಿರ್ಮಾಣಕ್ಕೆ ಜ್ಞಾನದ ವಿಕಾಸ ಅಗತ್ಯ. ವಚನ ದಾಸೋಹ ಸಂಸ್ಕೃತಿ ಬೆಳೆಯಬೇಕು. ಯುವಕರಲ್ಲಿ ಸಮಾಜ ಸೇವೆ ಗುಣ ಬೆಳೆಯಬೇಕು ಎಂದು ನಾಗನಾಥ ಚಟ್ನಾಳೆ ಹೇಳಿದರು.

ತಾಲ್ಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಶನಿವಾರ ರಾತ್ರಿ ಬಸವಜ್ಯೋತಿ ನಿಮಿತ್ತ ಸಂತೋಷ ಬುಕ್ಕಾ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿ,ಪ್ರತಿಯೊಬ್ಬರು ಶರಣ ಸಂಸ್ಕೃತಿ, ವಚನ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.

ಲಿಂಗಾಯತ ನೌಕರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶವಶರಣಪ್ಪ ವಲ್ಲೇಪುರೆ ಮಾತನಾಡಿದರು.

ADVERTISEMENT

ಬಸವಣಪ್ಪ ಬುಕ್ಕಾ, ಕಮಲಾಕರ ಕರಂಜೆ, ಪ್ರಕಾಶ ಬುಕ್ಕಾ, ಶರಣೆ ಚಿನ್ನಮ್ಮಾ, ಶಶಿಕಲಾ ಬುಕ್ಕಾ, ಶಕುಂತಲಾ ಬುಕ್ಕಾ ಹಾಗೂ ಗ್ರಾಮಸ್ಥರುಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.