ADVERTISEMENT

ರಾಮಲಿಂಗೇಶ್ವರ ಜಾತ್ರೆ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 12:34 IST
Last Updated 29 ಮಾರ್ಚ್ 2023, 12:34 IST
ಚಿಟಗುಪ್ಪ ತಾಲ್ಲೂಕಿನ ರಾಮಪೂರ್‌ ಗ್ರಾಮದ ಹೊರವಲಯದ ಬೆಟ್ಟದಲ್ಲಿರುವ ರಾಮಲಿಂಗೇಶ್ವರ ದೇಗುಲ
ಚಿಟಗುಪ್ಪ ತಾಲ್ಲೂಕಿನ ರಾಮಪೂರ್‌ ಗ್ರಾಮದ ಹೊರವಲಯದ ಬೆಟ್ಟದಲ್ಲಿರುವ ರಾಮಲಿಂಗೇಶ್ವರ ದೇಗುಲ   

ಚಿಟಗುಪ್ಪ: ತಾಲ್ಲೂಕಿನ ರಾಮಪೂರ್‌ ಗ್ರಾಮದ ರಾಮಲಿಂಗೇಶ್ವರ ದೇಗುಲದಲ್ಲಿ ಗುರುವಾರದಿಂದ (ಮಾ.30) ಏ.1 ರವರೆಗೆ ಜಾತ್ರೆ ನಡೆಯಲಿದೆ.

ಗುರುವಾರ ಬೆಳಿಗ್ಗೆ ಕುಂಭ ಮೆರವಣಿಗೆ ನಡೆಯಲಿದೆ. ದೇಗುಲದಲ್ಲಿ ಸಂಗೀತ–ರುದ್ರಾಭಿಷೇಕ ಪೂಜೆ ನಡೆಯುವುದು. ಮಧ್ಯಾಹ್ನ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.

ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ಧರ್ಮಸಭೆ ಆಯೋಜನೆ ಮಾಡಲಾಗಿದೆ. ಬಳಿಕ ರಾಮಲಿಂಗೇಶ್ವರ ದೇವರ ತೊಟ್ಟಿಲು ಕಾರ್ಯಕ್ರಮ ನಡೆಯುತ್ತದೆ.

ADVERTISEMENT

ರಾತ್ರಿ, ಸಂಗೀತ ಕಲಾವಿದರಾದ ವಿಠಲ ಮಾಳಚಾಪುರ, ಬಿ.ಕೆ.ಕುಲಕರ್ಣಿ ಸೊಂತ, ವೀರಂತಪ್ಪ ನಿಂಗನಾಯ್ಕ ಸೊಂತ, ಅಮೃತ ಶರಣನಗರ, ನಾಮದೇವ ನೀಲೆ ಮೈಸಲಗಾ, ಚಂದ್ರಕಾಂತ ಗಡಿನಿಂಗದಳ್, ಶರಣು ನೇಳಕೂಡ, ಕಾಶಣ್ಣ ಮುಚಳಂಬಿ, ಮಾಣಿಕಪ್ಪ ಪಂಚಾಳ ಚೀನಕೇರಾ ಅವರಿಂದ ಸಂಗೀತ ದರ್ಬಾರ್ ನಡೆಯಲಿದೆ.

ಮಾ.31ರ ಬೆಳಿಗ್ಗೆ ದೇವರಿಗೆ ಸಂಗೀತ–ರುದ್ರಾಭಿಷೇಕ ಪೂಜೆ ನಡೆಯಲಿದೆ. ರಾತ್ರಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಬಳಿಕ ರಥೋತ್ಸವ ಜರುಗಲಿದೆ.

ಏ.1ರ ಬೆಳಿಗ್ಗೆ ರಾಜ್ಯ, ತೆಲಂಗಾಣ, ಆಂಧ್ರಪ‍್ರದೇಶ, ಮಹಾರಾಷ್ಟ್ರಗಳಿಂದ ಆಗಮಿಸುವ ಕುಸ್ತಿ ಪೈಲ್ವಾನರಿಂದ ಜಂಗಿ ಕುಸ್ತಿ ಸ್ಪರ್ಧೆ ನಡೆಯಲಿದೆ. ರಾತ್ರಿ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.