ADVERTISEMENT

ಜಗಪಾಲ್ ಸಿಂಗ್ ಸಂಗೀತ ಸೇವೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 15:39 IST
Last Updated 1 ಆಗಸ್ಟ್ 2022, 15:39 IST
ಬೀದರ್‌ನ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಭಜನ ಸಂಧ್ಯಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಉದ್ಘಾಟಿಸಿದರು
ಬೀದರ್‌ನ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಭಜನ ಸಂಧ್ಯಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಉದ್ಘಾಟಿಸಿದರು   

ಬೀದರ್: ಜಗಪಾಲ್‍ಸಿಂಗ್ ಪವಾರ್ ಅವರ ಸಂಗೀತ ಸೇವೆ ಅನನ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ನುಡಿದರು.

ಸಂಗೀತ ಕಲಾ ಮಂಡಳ ವತಿಯಿಂದ ಜಗಪಾಲ್‍ಸಿಂಗ್ ಅವರ 22ನೇ ಪುಣ್ಯತಿಥಿ ಅಂಗವಾಗಿ ಇಲ್ಲಿಯ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಭಜನ ಸಂಧ್ಯಾ ಹಾಗೂ ಜೆ.ಎಸ್.ಪಿ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತ ಸೇವೆಗಾಗಿ ಕೇಂದ್ರ ಸರ್ಕಾರ ಪವಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ನುಡಿದರು.

ADVERTISEMENT

ಕಲಾವಿದರಾದ ರಾಮಲು ಗಾದಗಿ ಹಾಗೂ ಜಗನ್ನಾಥ ನಾನಕೇರಿ ಗಾಯನ ನಡೆಸಿಕೊಟ್ಟರು.
ವೀರಭದ್ರಪ್ಪ ಗಾದಗಿ, ವಿಜಯಕುಮಾರ ಸೋನಾರೆ, ಅಪ್ಪಾರಾವ್ ಸೌದಿ, ಶಿವಾಜಿ ಸಗರ್, ವಿನಾಯಕ ಚೌಧರಿ, ಪ್ರೊ. ಎಸ್.ವಿ. ಕಲ್ಮಠ್, ರಘುನಾಥರಾವ್ ಪಾಂಚಾಳ್ ಇದ್ದರು.

ರಾಜೇಂದ್ರಸಿಂಗ್ ಪವಾರ್ ಸ್ವಾಗತಿಸಿದರು. ಸಂತೋಷಿ ಮಠಪತಿ ನಿರೂಪಿಸಿದರು. ಎಸ್.ಆರ್. ಸಂಗಮಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.