ADVERTISEMENT

ಜೈ ಹನುಮಾನ ಮಂದಿರ ಉದ್ಘಾಟನೆ 25ಕ್ಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 15:38 IST
Last Updated 18 ಏಪ್ರಿಲ್ 2022, 15:38 IST

ಬೀದರ್‌: ನಗರದ ರಾಂಪೂರೆ ಕಾಲೊನಿಯಲ್ಲಿ ಜೈ ಹನುಮಾನ ಮಂದಿರ ಉದ್ಘಾಟನೆ ಪ್ರಯುಕ್ತ ಏಪ್ರಿಲ್ 23, 24 ಹಾಗೂ 25 ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

23 ರಂದು ಬೆಳಿಗ್ಗೆ 7ಕ್ಕೆ ಹನುಮಾನ ದೇವರ ಮೂರ್ತಿ ಮೆರವಣಿಗೆ ಜರುಗಲಿದೆ. ಕೇಂದ್ರ ಸಚಿವ ಭಗವಂತ ಖೂಬಾ ಮೆರವಣಿಗೆಗೆ ಚಾಲನೆ ನೀಡುವರು.

24 ರಂದು ದೇವರಿಗೆ ಪೂಜೆ, ಹವನ, ಎಣ್ಣೆಸ್ನಾನ ವಿಧ, ಮಹಾ ಮಂಗಳಾರತಿ, ಭಜನೆ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ.
25 ರಂದು ಮಹಾ ಪೂಜೆ, ಹವನ, ಯಂತ್ರ ಸ್ಥಾಪನೆ, ಹನುಮಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ಮಹಾ ಮಂಗಳಾರತಿ ನಡೆಯಲಿದೆ.

ADVERTISEMENT

ಅಂದು ಮಧ್ಯಾಹ್ನ 2ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ದೇವಸ್ಥಾನವನ್ನು ಉದ್ಘಾಟಿಸುವರು. ಜಿ.ಎನ್. ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಬಿಡಿಎ ಅಧ್ಯಕ್ಷ ಬಾಬುವಾಲಿ, ಸುನಂದಾ ಬಹೆನ್‍ಜಿ, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪಾಲ್ಗೊಳ್ಳುವರು ಎಂದು ಜೈ ಹನುಮಾನ ಮಂದಿರ ಟ್ರಸ್ಟ್ ಅಧ್ಯಕ್ಷ ಶ್ರೀಮಂತ ಸಪಾಟೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.