ADVERTISEMENT

ಬೀದರ್‌: 2023, 2024ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 12:55 IST
Last Updated 15 ಮಾರ್ಚ್ 2025, 12:55 IST
   

ಬೀದರ್‌: ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ 2023, 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ, 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಲಾಯಿತು.

ತಜ್ಞ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಯು ತಲಾ ₹50 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಮಾಣ ಪತ್ರ, ವಾರ್ಷಿಕ ಗೌರವ ಪ್ರಶಸ್ತಿಯು ತಲಾ ₹25 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಮಾಣ ಪತ್ರ, ಒಳಗೊಂಡಿದೆ.

ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ಪ್ರಶಸ್ತಿ ಪುರಸ್ಕೃತ ವಿವರ ಹೀಗಿದೆ:

ಜನಪದ ಕಲಾವಿದರಾದ ಬೆಂಗಳೂರಿನ ಕೆ.ಎಂ. ರಾಮಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಓಬಮ್ಮ ವೆಂಕಟೇಶ, ರಾಮನಗರದ ರಂಗಯ್ಯ, ಕೋಲಾರದ ತೋಪಣ್ಣ, ಚಿಕ್ಕಬಳ್ಳಾಪುರದ ದೊಡ್ಡ ಕೂರ್ಲಪ್ಪ, ತುಮಕೂರಿನ ಕದರಮ್ಮ, ದಾವಣಗೆರೆ ಕಾಟಮ್ಮ, ಚಿತ್ರದುರ್ಗದ ಸಿರಿಯಮ್ಮ, ಶಿವಮೊಗ್ಗದ ಟೀಕಪ್ಪ ಕಣ್ಣೂರ, ಕೊಡಗಿನ ದೇವಕಿ ಕೆ.ಸಿ., ಮಂಡ್ಯದ ಗುರುಬಸವಯ್ಯ, ಹಾಸನದ ವೀರಭದ್ರಯ್ಯ, ಚಿಕ್ಕಮಗಳೂರಿನ ನಾಗರಾಜಪ್ಪ ವೈ.ಪಿ., ಮೈಸೂರಿನ ಗುರುಸಿದ್ದಯ್ಯ, ಉಡುಪಿಯ ಅಪ್ಪಿ, ದಕ್ಷಿಣ ಕನ್ನಡ ಜಿಲ್ಲೆಯ ಲೀಲಾವತಿ, ಚಾಮರಾಜನಗರದ ಗೌರಮ್ಮ, ಬೆಳಗಾವಿಯ ಶಿವನಪ್ಪ ಚಂದರಗಿ, ಬಾಗಲಕೋಟೆಯ ಹನಮಂತ ವೆಂಕಪ್ಪ ಸಂಗತೇಕರ, ವಿಜಯಪುರದ ಇಮಾಂಬಿ ಇಮಾಮಸಾಬ್‌ ದೊಡ್ಡಮನಿ, ಗದುಗಿನ ಬಸಪ್ಪ ಹಡಗಲಿ, ಬಳ್ಳಾರಿಯ ದಳವಾಯಿ ಚಿತ್ತಪ್ಪ, ಹಾವೇರಿಯ ಸಾವಕ್ಕಾ ಓಲೇಕಾರ, ಉತ್ತರ ಕನ್ನಡದ ಈರಯ್ಯ ಮೋಗೆರ,ಕಲಬುರಗಿಯ ಅಕ್ಕಮ್ಮ, ಬೀದರ್‌ನ ಏಸಪ್ಪ ಗುಂಡಪ್ಪ, ರಾಯಚೂರಿನ ಶಾಂತಮ್ಮ ಜಂಬಣ್ಣ, ಕೊಪ್ಪಳದ ರೇವಣಪ್ಪ ನಿಂಗಪ್ಪ, ಧಾರವಾಡದ ರಾಮು ಮೂಲಗಿ, ಯಾದಗಿರಿಯ ಅಮರಯ್ಯ ಸ್ವಾಮಿ ಅವರಿಗೆ 2023ನೇ ಸಾಲಿನ ಪ್ರಶಸ್ತಿ ನೀಡಲಾಯಿತು. ದಕ್ಷಿಣ ಕನ್ನಡದ ಕೆ. ಚಿನ್ನಪ್ಪಗೌಡ ಹಾಗೂ ವಿಜಯನಗರದ ಮಂಜುನಾಥ ಬೇವಿನಕಟ್ಟಿ ಅವರಿಗೆ 2023ನೇ ಸಾಲಿನ ತಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರು ನಗರ ಜಿಲ್ಲೆಯ ಜೋಗಿಲ ಸಿದ್ದರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿದ್ದಯ್ಯ ಸಿ. ಎಚ್‌., ರಾಮನಗರದ ಎಂ. ಮಹೇಶ, ಕೋಲಾರದ ಸುನಂದಮ್ಮ, ಚಿಕ್ಕಬಳ್ಳಾಪುರದ ವೆಂಕಟರಮಣಪ್ಪ, ತುಮಕೂರಿನ ಸಿದ್ದಪ್ಪ, ದಾವಣಗೆರೆಯ ಮಾರ್ತಾಂಡಪ್ಪ, ಚಿತ್ರದುರ್ಗದ ಎ. ಶ್ರೀನಿವಾಸ, ಶಿವಮೊಗ್ಗದ ಗೌರಮ್ಮ, ಮೈಸೂರಿನ ಸಿ. ಮಂಜುನಾಥ, ಮಂಡ್ಯದ ಹುರುಗಲವಾಡಿ ರಾಮಯ್ಯ, ಹಾಸನದ ಬಿ.ಟಿ. ಮಾನವ, ಚಿಕ್ಕಮಗಳೂರಿನ ಬಿ.ಪಿ. ಪರಮೇಶ್ವರಪ್ಪ, ಚಾಮರಾಜನಗರದ ಸಿದ್ದರಾಜು ಆರ್‌., ದಕ್ಷಿಣ ಕನ್ನಡದ ಜಯಂತಿ, ಉಡುಪಿಯ ಎನ್‌. ಗಣೇಶ್‌ ಗಂಗೊಳ್ಳಿ, ಕೊಡಗಿನ ಎಸ್‌.ಆರ್‌. ಸರೋಜ, ಬೆಳಗಾವಿಯ ಕಮಲಾ ಮರಗನ್ನವರ, ಧಾರವಾಡದ ಪ್ರಭು ಬಸಪ್ಪ ಕುಂದರಗಿ, ವಿಜಯಪುರದ ಸೋಮಣ್ಣ ದುಂಡಪ್ಪ ಧನಗೊಂಡ, ಬಾಗಲಕೋಟೆಯ ಗಂಗಪ್ಪ ಮ. ಕರಡಿ, ಉತ್ತರ ಕನ್ನಡದ ಗಣಪು ಬಡವಾ ಗೌಡ, ಹಾವೇರಿಯ ಗಿರಿಜವ್ವ ಹನುಮಪ್ಪ ಬಣಕಾರ, ಗದುಗಿನ ಗೋವಿಂದಪ್ಪ ರಾಮಚಂದ್ರಪ್ಪ, ಕಲಬುರಗಿಯ ಬೋರಮ್ಮ, ಬೀದರ್‌ನ ಮಾರುತಿ ಕೋಳಿ, ರಾಯಚೂರಿನ ಯಲ್ಲಮ್ಮ, ಕೊಪ್ಪಳದ ಎಚ್‌. ಚಂದ್ರಶೇಖರ ಹಡಪದ ಅವರಿಗೆ 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳ್ಳಾರಿಯ ಕೆ. ಶಂಕರಪ್ಪ, ಯಾದಗಿರಿಯ ಗೋಪಣ್ಣ, ಮೈಸೂರಿನ ಮೈಲಹಳ್ಳಿ ರೇವಣ್ಣ, ವಿಜಯನಗರದ ವೆಂಕಟೇಶ ಇಂದ್ವಾಡಿ ಅವರಿಗೆ 2024ನೇ ಸಾಲಿನ ತಜ್ಞ ಪ್ರಶಸ್ತಿ ನೀಡಲಾಯಿತು.

ಬೆಂಗಳೂರಿನ ಬಿ.ಎಸ್‌. ಸ್ವಾಮಿ ಕುರುವ ಬಸವರಾಜ, ನಾಗ ಎಚ್‌. ಹುಬ್ಳಿ, ವಿಜಯಶ್ರೀ ಸಬರದ ಹಾಗೂ ಮೈಸೂರಿನ ವ.ನಂ. ಶಿವರಾಮು ಅವರಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.