ADVERTISEMENT

ನಗರಸಭೆ ಕಚೇರಿ ಎದುರು ಜೆಡಿಎಸ್‌ ಪ್ರತಿಭಟನೆ

ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳ ನಿಷ್ಕಾಳಜಿ ಆರೋಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 14:08 IST
Last Updated 23 ನವೆಂಬರ್ 2022, 14:08 IST
ಬಸವಕಲ್ಯಾಣದ ನಗರಸಭೆ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬಸವಕಲ್ಯಾಣದ ನಗರಸಭೆ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಬಸವಕಲ್ಯಾಣ: ನಗರದಲ್ಲಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಿಂಗಳ ಹಿಂದೆ ಧರಣಿ ನಡೆಸಿ ಚರಂಡಿ ಸಮಸ್ಯೆ, ವಿದ್ಯುತ್ ದೀಪದ ಸಮಸ್ಯೆ ಬಗೆಹರಿಸಲು ಕೇಳಿಕೊಂಡರೂ ಕ್ರಮ ತೆಗೆದುಕೊಂಡಿಲ್ಲ. ನಾಯಿಗಳ ಹಾವಳಿಯ ಬಗ್ಗೆ ಮೊದಲೇ ಎಚ್ಚರಿಸಲಾಗಿತ್ತು. ಆದರೂ ಲಕ್ಷ್ಯ ನೀಡದ ಕಾರಣ ಗಾಡಿವಾನ ಗಲ್ಲಿಯ ಬಾಲಕಿ ಒಳಗೊಂಡು ಅನೇಕರಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಹೀಗಿದ್ದರೂ ಯಾರೂ ಗಮನಹರಿಸುತ್ತಿಲ್ಲ ಎಂದು ದೂರಲಾಯಿತು.

ಪಕ್ಷದ ಮುಖಂಡರಾದ ಸೈಯದ್ ಯಶ್ರಬಅಲಿ ಖಾದ್ರಿ ಹಾಗೂ ಬಸವಣ್ಣಪ್ಪ ನೆಲ್ಲಗಿ ಮಾತನಾಡಿದರು.

ADVERTISEMENT

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅರ್ಷದ್ ಮಹಾಗಾವಿ, ಸಂಜೀವಕುಮಾರ ಸಂಗನೂರೆ, ಧನರಾಜ ರಾಜೋಳೆ, ಮಾರುತಿ ಫುಲೆ, ಪ್ರೀತಂ ಮದಲವಾಡಾ, ಗೌಸ, ಖಲೀಲಮಿಯ್ಯಾ, ರತೀಶ ಗುಂಗೆ, ಗುರುನಾಥ ಬೇಲೂರ ಹಾಗೂ ಖೈಯೀಮಸಾಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.